ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳ ಆಯ್ಕೆ

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಮೆಳೇಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು.

ಶಾಲೆಯ ಮುಖ್ಯಶಿಕ್ಷಕರಾದ ಕೆ.ವಿ. ವೆಂಕಟೇಶ ರೆಡ್ಡಿ ಮುಖ್ಯ ಚುನಾವಣಾಧಿಕಾರಿಯಾಗಿ, ಸಮಾಜ ವಿಜ್ಞಾನ ಶಿಕ್ಷಕ ರಾಮಚಂದ್ರಯ್ಯ ಸಹಾಯಕ ಚುನಾವಣಾಧಿಕಾರಿಯಾಗಿ,
ಶಿಕ್ಷಕರುಗಳಾ ಎಂ.ಬಸವರಾಜು, ಬಿ.ಸುಶೀಲ, ಪಿ.ಎನ್.ಸ್ವಾತಿ, ಡಿ.ಎಂ.ಮೋಹನ್ ಕುಮಾರ್, ಎಂ.ಸಿ.ಗಿರಿರಂಗಯ್ಯ ಮತ್ತು ಕೆ.ಎನ್.ಸಂತೋಷ. ತರಗತಿಯ ಚುನಾವಣಾ ಅಧಿಕಾಗಳಾಗಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.

ಚುನಾವಣೆಯಲ್ಲಿ 10ನೇ ತರಗತಿಗೆ ಭವಿಷ್ ಗೌಡ, ಎನ್.ನಿಶಾಂಕ್, ಮೋನಿಶಾ, ಜಾಹ್ನವಿ, 9ನೇ ತರಗತಿ ಎ.ವಿಭಾಗಕ್ಕೆ ಅಜಯ್ ಕುಮಾರ್, ಸಿ.ಎ.ಅಂಕಿತ್ ಕುಮಾರ್,
ಟಿ.ಎ.ಅಮಿತಾ, ಎಸ್.ಬಿ.ತ್ರಿಶಾ ಮತ್ತು 9ನೇ ತರಗತಿ ಬಿ ವಿಭಾಗಕ್ಕೆ ಎಚ್.ಭುವನ್ ಗೌಡ, ಎನ್.ಅಪೂರ್ವ, 8ನೇ ತರಗತಿ ಎ ವಿಭಾಗಕ್ಕೆ ಎಸ್.ನಿತಿನ್ ಕುಮಾರ್, ಸಿ.ಜಿ.ಲಕ್ಷ್ಮಿ, 8 ನೇ ತರಗತಿ ಬಿ ವಿಭಾಗಕ್ಕೆ ಅಭಿಲಾಷ್, ಸಿ.ವಿ.ಬಿಂದು ಆಯ್ಕೆಯಾಗಿದ್ದಾರೆ.

ಶಾಲಾ ಯುವ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿಯವರು, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವಿಕುಮಾರ್ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *