ನಗರದ 17 ನೇ ವಾರ್ಡ್ ಗಾಂಧಿನಗರದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಕಳೆದ ಎರಡು ದಿನಗಳಿಂದ ಒಳಚರಂಡಿ ಛೇಂಬರ್ ತುಂಬಿ ಉಕ್ಕಿ ಹರಿಯುತ್ತಿದೆ.
ನಡು ರಸ್ತೆಯಲ್ಲಿ ಇರುವ ಒಳಚರಂಡಿ ಛೇಂಬರ್ ತುಂಬಿ ಬುಗ್ಗೆಗಳ ಮೂಲಕ ಹೊರಬರುತ್ತಿದೆ. ಇದರಿಂದ ರಸ್ತೆಯಲ್ಲಿ ದುರ್ನಾತ ಏರ್ಪಟ್ಟಿದೆ, ದುರ್ವಾಸನೆಯಿಂದ ಸಾರ್ವಜನಿಕರು, ವಾಹನ ಸವಾರರು ರಸ್ತೆಯಲ್ಲಿ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ಒಳಚರಂಡಿ ಛೇಂಬರ್ ತುಂಬಿ ಕೆಟ್ಟ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದನ್ನು ಕಂಡು ಕೇಳರಿಯದೆ ಇರುವ ನಗರಸಭೆ. ನಗರಸಭೆ ಬೇಜವಾಬ್ದಾರಿ ತನಕ್ಕೆ ಸಾರ್ವಜನಿಕರು ಕಿರಿಕಿರಿ ಅನುಭವಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಾರ್ಡ್ ನಿವಾಸಿಗಳು.
ಕೂಡಲೇ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಬಂದು ಒಳಚರಂಡಿ ನೀರು ರಸ್ತೆಗೆ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ, ರಸ್ತೆಯಲ್ಲಿ ಸಾರ್ವಜನಿಕರು, ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕು ಎಂದು ಆಗ್ರಹಿಸಿದರು.