2023-24ನೇ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, SSLC ಪರೀಕ್ಷೆಯಲ್ಲಿ ತಾಲ್ಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ಪ್ರತಿಶತ (ಶೇ.100 ) ಫಲಿತಾಂಶ ಪಡೆದು ಸಾಧನೆ ಮಾಡಿದೆ.
ಗ್ರಾಮೀಣ ಭಾಗದ ಶಾಲೆಯ ವಿದ್ಯಾರ್ಥಿಗಳಾದ ಗಾನಶ್ರೀ ಕೆ.ಎಸ್ 625ಕ್ಕೆ 607 ಅಂಕ(ಶೇ 97.01), ಸಂಜನ ಎಂ 602 ಅಂಕಗಳು(ಶೇ 96.32), ದಿವ್ಯಶ್ರಿ ಎ.ಎಸ್ 596 ಅಂಕ(ಶೇ 95.36) ಚಿನ್ಮಯಿ ಜಿ 596 ಅಂಕ(ಶೇ 95.36), ಯಶೋಧ ಎಂ ಹೆಚ್ 584 ಅಂಕಗಳನ್ನು (ಶೇ 93.44) ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಶಾಲೆಯಿಂದ ಒಟ್ಟು 30 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ( A+) 9 ವಿಧ್ಯಾರ್ಥಿಗಳು, ಉನ್ನತ ಶ್ರೇಣಿಯಲ್ಲಿ( A) 21 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಾಧಕ ವಿಧ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಕೆ.ಜಿ ಶ್ರೀನಿವಾಸಮೂರ್ತಿ, ಅಧ್ಯಕ್ಷರಾದ ಉಷಾ ಶ್ರೀನಿವಾಸಮೂರ್ತಿ, ಮುಖ್ಯೋಪಾಧ್ಯಾಯರಾದ ಶೋಭಾವತಿ ಎಂ ಹಾಗು ಶಾಲೆಯ ಸಹ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲೂ ಪ್ರತಿಶತ ಫಲಿತಾಂಶ ದಾಖಲಿಸಿದ್ದರು.