ಗೆಲುವಿನ ಸನಿಹದತ್ತ ಸಿಪಿವೈ ಇದ್ದಾರೆ. ನಿರಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನೂ ಕೇವಲ 6 ಸುತ್ತುಗಳ ಮಾತ್ರ ಎಣಿಕಾ ಕಾರ್ಯ ಬಾಕಿ ಇದೆ. ಈಗಾಗಲೇ 1 ಲಕ್ಷದ 50 ಸಾವಿರ ಮತಗಳ ಎಣಿಕಾ ಕಾರ್ಯ ಪೂರ್ಣವಾಗಿದೆ. ಉಳಿದ 50600 ಮತಗಳ ಎಣಿಕೆ ಬಾಕಿ ಇದೆ.
ಪ್ರಮುಖ ಅಭ್ಯರ್ಥಿಗಳಾದ ನಿಖಿಲ್‌ಕುಮಾರಸ್ವಾಮಿ, ಸಿ.ಪಿಯೋಗೇಶ್ವರ್ ನಡುವೆ ನೇರ ಹಣಾಹಣಿಯೊಂದಿಗೆ ತೀವ್ರ ಪೈಪೋಟಿ ನಡಿದಿದ್ದು, ಫಲಿತಾಂಶದ ಬಳಿಕ ಸಂಭ್ರಮಾಚಾರಣೆಗೂ ಅಷ್ಟೆ ಪೈಪೋಟಿ ಏರ್ಪಟ್ಟಿದೆ. ಮತ ಏಣಿಕೆಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಅಭ್ಯರ್ಥಿಗಳು, ಪಕ್ಷಗಳ ಮುಖಂಡರು ಹಾಗೂ ಕಾರ‍್ಯಕರ್ತರ ಎದೆ ಬಡಿತವನ್ನು ಹೆಚ್ಚಿಸಿರುವುದು ಸುಳ್ಳಲ್ಲ.
ಸಿಪಿ ಯೋಗೇಶ್ವರ್ ವಿಜಯ ಯಾತ್ರೆ ವಾಹನ ರೆಡಿ
ಚನ್ನಪಟ್ಟಣದಲ್ಲಿ ಪೂರ್ಣ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿಜಯೋತ್ಸವದ ವಾಹನ ಸಿದ್ಧವಾಗಿದೆ. ಈಗಾಗಲೇ 12 ಸುತ್ತುಗಳ ಮತ ಎಣಿಕೆ ಮುಗಿಸಿದ್ದು, ಸಿಪಿ ಯೋಗೇಶ್ವರ್ 22 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.