13 ವರ್ಷದ ದಾಂಪತ್ಯ ಜೀವನಕ್ಕೆ ಒಬ್ಬ ಮಗನಿದ್ದಾನೆ. ಇನ್ಸ್ಚಾಗ್ರಾಮ್ ನಲ್ಲಿದ್ದ ಅವಳಿಗೆ ಹೊಸ ಲವರ್ ಸಿಕ್ಕಿದ್ದು, ವಾರದಲ್ಲಿ ಪ್ರೀತಿ ಮಾಡಿದ್ಳು, ಇದೀಗ ಲವರ್ ಜೊತೆ ಮದುವೆಯಾಗಿ ಗಂಡನಿಗೆ ಶಾಕ್ ನೀಡಿದ್ದಾಳೆ.
ನೆಲಮಂಗಲ ನಗರದ ಜಕ್ಕಸಂದ್ರದ ರಾಘವೇಂದ್ರ ನಗರದ ನೇತ್ರಾವತಿ ಎಂಬಾಕೆ ಗಂಡ ಮತ್ತು ಆತನ ಮನೆಯವರಿಗೆ ಬೀಗ್ ಶಾಕ್ ಕೊಟ್ಟಿದ್ದಾಳೆ.
ಗಂಡನ ಜೊತೆ ಜಗಳ ಮಾಡ್ಕೊಂಡ್ ಮನೆ ಬಿಟ್ಟು ಹೋಗಿದ್ದವಳು, ಇನ್ಸ್ಟಾ ಗ್ರಾಮ್ ನಲ್ಲಿ ಮದುವೆ ವಿಡಿಯೋ ಶೇರ್ ಮಾಡಿಕೊಂಡು, ಮತ್ತೊಂದು ಮದುವೆಯಾಗಿರುವುದಾಗಿ ಹೇಳಿದ್ದಾಳೆ.
ಪ್ರಕರಣ ಸಂಬಂಧ ಆಕೆಯ ಗಂಡನ ಕಡೆಯವರು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ನೇತ್ರಾವತಿ 13 ವರ್ಷಗಳ ಹಿಂದೆ ರಮೇಶ್ ಜೊತೆ ಮದುವೆಯಾಗಿದ್ಳು, ಇವರ ದಾಂಪತ್ಯಕ್ಕೆ ಒಬ್ಬ ಮಗ ಸಹ ಇದ್ದಾನೆ, ಡ್ರೈವರ್ ಕೆಲಸ ಮಾಡುವ ರಮೇಶ್ ಸಂಸಾರವನ್ನ ಚೆನ್ನಾಗಿಯೇ ನೋಡಿಕೊಂಡಿದ್ದ, ಇತ್ತಿಚೇಗೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಜಗಳ ನಂತರ ನೇತ್ರಾವತಿ ಮನೆ ಬಿಟ್ಟು ಹೋಗಿದ್ದಾಳೆ. ವಾರದ ನಂತರ ಅವಳ ಇನ್ಸ್ಟಾಗ್ರಾಮ್ ನಲ್ಲಿ ಮದುವೆಯಾಗಿರುವ ವಿಡಿಯೋ ಶೇರ್ ಮಾಡಿದ್ದಾಳೆ.
ಸಂತೋಷ ಎಂಬ ಯುವಕನನ್ನ ಮದುವೆಯಾಗಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾಳೆ, ಅಂದಹಾಗೇ, ವಾರದ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಸಂತೋಷ ಪರಿಚಯವಾಗಿದೆ, ನೇತ್ರಾವತಿ ಆತನನ್ನು ಪ್ರೀತಿ ಮಾಡಿದ್ದಾಳೆ, ವಾರದೊಳಗೆ ಆತನ ಜೊತೆ ಮದುವೆ ಆಗಿದ್ದಾಳೆ, ಇನ್ಸ್ಟಾಗ್ರಾಮ್ ನಲ್ಲಿ ಮದುವೆ ವಿಡಿಯೋ ನೋಡಿದ ಗಂಡ ರಮೇಶ್ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.
ನೇತ್ರಾವತಿಗೆ ತಂದೆಯ ಮನೆಯಿಂದ 50 ಲಕ್ಷ ಮೌಲ್ಯದ ಆಸ್ತಿ ಬಂದಿದೆ, ಈ ಆಸ್ತಿಯನ್ನ ಹೊಡೆಯಲು ಸಂತೋಷ್ ಎಂಬ ಯುವಕ ನೇತ್ರಾವತಿಯನ್ನ ಮದುವೆಯಾಗಿದ್ದಾನೆಂದು ರಮೇಶ್ ಆರೋಪ ಮಾಡಿದ್ದಾನೆ, ನನಗೆ ನನ್ನ ಮಗ ಬೇಕು, ಹೆಂಡತಿಯಿಂದ ನ್ಯಾಯ ಬೇಕೆಂದು ದೂರು ನೀಡಿದ್ದಾನೆ.