ಫೈಲ್ ನಾಪತ್ತೆಯಾಗಿದ್ದಕ್ಕೆ ಮನನೊಂದು PWD ಅಧಿಕಾರಿ ಆತ್ಮಹತ್ಯೆಗೆ ಶರಣು

ಫೈಲ್ ನಾಪತ್ತೆಯಾಗಿದ್ದಕ್ಕೆ ಮನನೊಂದು PWD ಅಧಿಕಾರಿ ಆತ್ಮಹತ್ಯೆಗೆ ಶರಣು

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಲಕ್ಷ್ಮೀನರಸಿಂಹಯ್ಯ(56) ಎಂಬುವರು ನೆಲಮಂಗಲ ಬಳಿಯ ಶಿವಗಂಗೆ ಪ್ರವಾಸಿ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾಗಿರುವಂತ ಅಧಿಕಾರಿ.

ತುಮಕೂರಿನ ಮಧುಗಿರಿಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಲಕ್ಷ್ಮೀನರಸಿಂಹಯ್ಯ ಅವರ ಕಚೇರಿಯಲ್ಲಿ ಕೆಲ ಫೈಲ್ ಗಳು ಮಿಸ್ಸಾಗಿದ್ದವಂತೆ. ಈ ಸಂಬಂಧ ಮೇಲಾಧಿಕಾರಿಗಳು ತನಿಖೆಗೂ ಸೂಚಿಸಿದ್ದರಂತೆ.

ಈ ಹಿನ್ನೆಲೆ ತಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಹುದು ಎಂಬ ಭಯದಲ್ಲಿ ಲಕ್ಷ್ಮೀನರಸಿಂಹಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ದಾಬಾಸ್ ಪೇಟೆ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *