12 ವರ್ಷಗಳಿಂದೆ ಮಾಡಿದ ಜಾತಿಗಣತಿಯನ್ನ ಈಗ ಅನುಷ್ಟಾನಕ್ಕೆ ತುರುವುದು ಎಷ್ಟು ಮಟ್ಟಿಗೆ ವೈಜ್ಞಾನಿಕ- ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ

ಸರ್ಕಾರದಿಂದ ಜಾತಿ ಜನಗಣತಿ ಬಿಡುಗಡೆಗೆ ಸಿದ್ಧತೆ ವಿಚಾರ

ಸರ್ಕಾರದಿಂದ ಜಾತಿ ಜನಗಣತಿ ಬಿಡುಗಡೆಗೆ ಸಿದ್ದತೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ ಅವರು, ಈಗಾಗಲೇ ಜಾತಿ ಗಣತಿ ಮಾಡಿ ಸುಮಾರು ಹನ್ನೆರೆಡು ವರ್ಷಗಳೇ ಕಳೆದಿವೆ. 10 ವರ್ಷಗಳಿಗೊಮ್ಮೆ ಜಾತಿ ಗಣತಿ ಮಾಡಬೇಕು. ಅದನ್ನ ಈಗಿನ ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಕೇಂದ್ರದಲ್ಲಿ ಜಾತಿ ಗಣತಿ‌ ಮಾಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇತ್ತೀಚಿಗೆ ನಿಧನರಾದ ಜೆಡಿಎಸ್ ಹಿರಿಯ ಮುಖಂಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಅವರ ನುಡಿ ನಮನ ಕಾರ್ಯಕ್ರಮವನ್ನು ಹಾಡೋನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು. ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಸದಾಗಿ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುವುದಾದರೆ ಮಾಡಲಿ, ಇಲ್ಲದಿದ್ದಲ್ಲಿ ಕೇಂದ್ರ ಸರ್ಕಾರ ಮಾಡುವ ತನಕ‌ವಾದರೂ ಕಾಯಬೇಕು. 12 ವರ್ಷಗಳಿಂದೆ ಮಾಡಿದ ಜಾತಿಗಣತಿಯನ್ನ ಈಗ ಅನುಷ್ಟಾನಕ್ಕೆ ತುರುವುದು ಎಷ್ಟು ಮಟ್ಟಿಗೆ ವೈಜ್ಞಾನಿಕ. ಅದರ ಸಾಧಕ ಭಾದಕಗಳನ್ನ ಚರ್ಚೆ ಮಾಡೋಣ ಎಂದರು.

ಸಿಟಿ ರವಿಗೆ ಪ್ರಾಣ ಬೆದರಿಕೆ ಪತ್ರ ವಿಚಾರ

ಸಿಟಿ ರವಿಗೆ ಪ್ರಾಣ ಬೆದರಿಕೆ ಪತ್ರ ವಿಚಾರಕ್ಕೆ ಸಂಬಂಧಸಿದಂತೆ ಮಾತನಾಡಿದ ಅವರು, ಪ್ರಾಣ ಬೆದರಿಕೆ ಪತ್ರ ಅದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

ಅಪ್ಪಯ್ಯಣ್ಣನವರಿಗೆ ನುಡಿನಮನ

ರಾಜಕೀಯ, ಸಮಾಜ ಸೇವೆಯಲ್ಲಿ ಅಪ್ಪಯ್ಯಣ್ಣರವರು ಬಹಳ ಕೆಲಸ ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ರಾಜಕೀಯ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಇಂತಹ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನ ಕಟ್ಟಿ ಬೆಳೆಸಿದವರು ಅಪ್ಪಯ್ಯಣ್ಣರವರು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಜೊತೆಯಲ್ಲಿ ಉತ್ತಮ ಸಂಬಂಧ  ಹೊಂದಿದ್ದರು. ಚುನಾವಣೆ ಬಂದಾಗ ಪಕ್ಷದ ನಿಷ್ಠಾವಂತರಾಗಿ ಕೆಲಸ ಮಾಡಿದ್ದವರು. ಅವರ ಪಕ್ಷ ನಿಷ್ಠೆಯಿಂದ ತಳ ಮಟ್ಟದಲ್ಲಿ ಪಕ್ಷ ಬೆಳೆಯಲು ಸಹಾಯವಾಗಿದೆ ಎಂದರು.

ಅವರ ಸಾವಿನ ದಿನ ನಮ್ಮ ಕುಟುಂಬದಿಂದ ಯಾರೂಬ್ಬರು ಬಾರದೆ ಇರುವುದಕ್ಕೆ ಬಹಳ ನೋವಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿ, ಶಾಸಕ ಧೀರಜ್ ಮುನಿರಾಜ್, ಬೆಂಗಳೂರು ಗ್ರಾಮಾಂತರ  ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳ ಮುನಿಶ್ಯಾಮಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಮಾಜಿ ಎಂಎಲ್ಸಿ ರಮೇಶ್ ಗೌಡ, ತೆಂಗು ನಾರು ಮಂಡಳಿ ಅಧ್ಯಕ್ಷ ಗಂಟಿಗಾನಹಳ್ಳಿ ಬಾಬು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಸೇರಿದಂತೆ‌ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!