
ಅಂತಾರಾಷ್ಟ್ರೀಯ ಯೋಗ ದಿನವನ್ನು ದೇಶಾದ್ಯಂತ 150ಕ್ಕೂ ಹೆಚ್ಚು ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಆಚರಿಸಲಾಗುತ್ತಿದೆ. ಅದೇರೀತಿ ಯೋಗದ ಮಹತ್ವ ಪ್ರಚುರ ಪಡಿಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ನೇತೃತ್ವದಲ್ಲಿ ಇಂದು(ಜೂ. 21ರಂದು) ಬೆಳಗ್ಗೆ 6ಕ್ಕೆ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ವಿವಿಧ ಇಲಾಖೆಗಳು ಹಾಗೂ ಯೋಗ ಕೇಂದ್ರಗಳ ಸಹಯೋಗದಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸುಮಾರು ಸಾವಿರಕ್ಕೂ ಜನ ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.
45 ನಿಮಿಷಗಳ ಕಾಲ ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಲಾಯಿತು.

ಯೋಗ ಎಂದರೆ ಶರೀರ, ಮನಸ್ಸು, ಅತ್ಮಗಳ ಸಮಾಗಮ. ಯೋಗದಿಂದ ಸಂಸ್ಕೃತಿ, ನಡೆಯಿಂದ ಒಂದಾಗುವ ಸುಸಂದರ್ಭ ಇದಾಗಿದೆ. ಯೋಗ ದಿನಾಚರಣೆಯಲ್ಲಿ ಶಿಷ್ಟಾಚಾರದ ಯೋಗ, ಪ್ರಾಣಾಯಾಮವನ್ನು ಸಾಮೂಹಿಕವಾಗಿ ಮಾಡುವುದರ ಜೊತೆಗೆ ಶಿಸ್ತುಬದ್ಧ ಬದುಕು ಹೇಗೆ ನಡೆಸುವುದು ಎನ್ನುವುದನ್ನು ಕಲಿಯಬಹುದಾಗಿದೆ.

ಈ ವೇಳೆ ವಿಶ್ವ ಯೋಗಾ ದಿನಾಚರಣೆ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಟ್ರಸ್ಟ್ ಗೌರವ ಅಧ್ಯಕ್ಷ ಪುಷ್ಪಾಂಡಜ ದಿವ್ಯಜ್ಞಾನಾನಂದ ಸ್ವಾಮೀಜಿ, ಕಾರ್ಯದರ್ಶಿ ಬಿ.ಜಿ. ಅಮರನಾಥ್, ಉಪಾಧ್ಯಕ್ಷ ಟಿ.ಎನ್.ಪ್ರಭುದೇವ್, ಸಹ ಕಾರ್ಯದರ್ಶಿ ಎಂ.ಕೆ.ವತ್ಸಲಾ, ಖಜಾಂಚಿ ಪಿ.ಕೆ.ಶ್ರೀನಿವಾಸ್, ಸಂಚಾಲಕರಾದ ಡಿ.ವಿ.ಗಿರೀಶ್, ಡಿ.ಪಿ.ಗೋಪಾಲ್, ಸನಾತನಮೂರ್ತಿ ಸೇರಿದಂತೆ ಇತರರು ಇದ್ದರು.