Oplus_0
1000 ರೂ. ವಿಚಾರಕ್ಕೆ ಕಿರಿಕ್ ಆಗಿ ಇಬ್ಬರಿಗೆ ಚಾಕು ಇರಿಯಲಾಗಿದೆ. ಈ ಘಟನೆ ಇಂದು ಬೆಳಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೇತನ್ ಮತ್ತು ಸುದೀಪ್ ಇರಿತಕ್ಕೊಳಗಾದವರು.
2 ವರ್ಷದ ಹಿಂದೆ ಸುದೀಪ್ ಗೆ ಯುವತಿಯೊಬ್ಬಳ ಜೊತೆ ಪ್ರೀತಿಯಾಗಿತ್ತು. ಆವಾಗ ಪ್ರಿಯತಮೆಗೆ 2 ಸಾವಿರ ರೂ. ಹಣವನ್ನು ಸಾಲದ ರೂಪದಲ್ಲಿ ಸುದೀಪ್ ಕೊಟ್ಟಿದ್ದ. ಇದಾದ ನಂತರ ಕೆಲ ತಿಂಗಳ ಹಿಂದೆ ಈ ಜೋಡಿ ನಡುವೆ ಬ್ರೇಕಪ್ ಆಗಿದೆ. ಬ್ರೇಕಪ್ ಆದ ನಂತರ ಮಾಜಿ ಪ್ರಿಯತಮೆ ಬಳಿ ಕೊಟ್ಟಿರುವ 2 ಸಾವಿರ ಹಣವನ್ನು ವಾಪಸ್ ನೀಡುವಂತೆ ಸುದೀಪ್ ಕೇಳಿದ್ದಾನೆ. 2000 ರೂ. ನಲ್ಲಿ ಸುದೀಪ್ ಗೆ 1000 ರೂ. ವಾಪಸ್ ಯುವತಿ ಕೊಟ್ಟಿದ್ದಳು. ಇನ್ನು ಉಳಿದ ಒಂದು ಸಾವಿರ ಕೊಡುವಂತೆ ಯುವತಿಗೆ ಫೋನ್ ಮಾಡಿ ಸುದೀಪ್ ಕೇಳಿದ್ದಾನೆ.
ಈ ವಿಚಾರ ಕೆಲ ಪುಂಡರಿಗೆ ಈ ಯುವತಿ ಸುದೀಪ್ ಮೇಲೆ ದೂರು ನೀಡಿದ್ದಾಳೆ. ಮೂರು ದಿನದ ಹಿಂದೆ ಜ್ಯೂಸ್ ಅಂಗಡಿ ಬಳಿ ನಾಲ್ಕೈದು ಜನ ಬಂದು ಯುವತಿ ಬಳಿ ಹಣ ಕೇಳ್ತೀಯಾ ಅಂತ ಹೇಳಿ ಅವರೇ 1000 ಸಾವಿರ ಫೋನ್ ಪೇ ಮಾಡಿ ಹೋಗಿದ್ದರು. ಇಷ್ಟಾದರು. ಮತ್ತೆ ಈ ಸುದೀಪ್ ಆ ಯುವತಿ ಬಳಿ ಹಣ ಹಾಕಿಸಿಕೊಳ್ಳುತ್ತಾನೆ.ಇದಕ್ಕೆ ಕುಪಿತಗೊಂಡ ಯುವಕರು ಅದೇ ದಿನ ಸಂಜೆ ಬಂದು ಯುವತಿ ಹಣ ಕೊಟ್ಟಿದ್ದರೂ ಮತ್ತೆ ಹಣ ಹಾಕಿಸಿಕೊಳ್ತೀಯಾ ಎಂದು ಗಲಾಟೆ ಮಾಡಿ ಸುದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸುದೀಪ್ ಗೆ ಹಲ್ಲೆ ಮಾಡುತ್ತಿದ್ದ ವೇಳೆ ಬಿಡಿಸಲು ಬಂದ ಚೇತನ್ ಗೂ ಚಾಕು ಇರಿಯಲಾಗಿದೆ. ಚೇತನ್ ನ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಸುದೀಪ್ ಬೆನ್ನಿಗೆ ಇರಿದು ಯುವಕರು ಎಸ್ಕೇಪ್ ಆಗಿದ್ದಾರೆ. ಬಿಡಿಸಲು ಬಂದವನು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…