1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಇದೀಗ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಅರ್ಹರಿಂದ ಆಹ್ವಾನಿಸಲಾಗಿದೆ.

 ಶೈಕ್ಷಣಿಕವಾಗಿ ಅರ್ಹತೆ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.

ಹುದ್ದೆ ಹೆಸರು : ಗ್ರಾಮ ಆಡಳಿತ ಅಧಿಕಾರಿ (VA – ಗ್ರಾಮ ಲೆಕ್ಕಿಗ), ಹುದ್ದೆಗಳ ಸಂಖ್ಯೆ : 1000, ವೇತನ ಶ್ರೇಣಿ : ರೂ.21400-42000., ಪಿಂಚಣಿ ಸೌಲಭ್ಯ : ಪಿಂಚಣಿ ರಹಿತ (ಎನ್ಪಿಎಸ್).

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆಯು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರಬೇಕು. ಅಥವಾ ಸಿಬಿಎಸ್ಇ / ಐಸಿಎಸ್ಇ ನಡೆಸುವ 12ನೇ ತರಗತಿ / ಎನ್ಐಓಎಸ್ ನಡೆಸುವ ಹೆಚ್ಎಸ್ಸಿ ಅರ್ಹತೆ ಪಡೆದಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ಯಾವುದೇ ವೃತ್ತಿ ಶಿಕ್ಷಣ ಡಿಪ್ಲೊಮ (ಜೆಓಸಿ / ಜೆಓಡಿಸಿ / ಜೆಎಲ್ಡಿಸಿ) ಉತ್ತೀರ್ಣರಾಗಿರಬೇಕು.

ಹುದ್ದೆಗೆ ವಯಸ್ಸಿನ ಅರ್ಹತೆಗಳು: ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು, ಪ್ರವರ್ಗ 2ಎ,2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

ಆನ್ಲೈನ್ ಮುಖಾಂತರ ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಮಾರ್ಚ್ 04,2024 ರ ಬೆಳಿಗ್ಗೆ 11:00 ರಿಂದ, ಕೊನೆ ದಿನಾಂಕ : ಏಪ್ರಿಲ್ 03,2024 ರ ರಾತ್ರಿ 11-59 ರ ವರೆಗೆ ಅವಕಾಶವಿರುತ್ತದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಏಪ್ರೀಲ್ 06,2024 ಕೊನೆಯ ದಿನವಾಗಿದೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಪ್ಲಿಕೇಶನ್ ಶುಲ್ಕ ವಿವರ

ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750., ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500.

ಅಭ್ಯರ್ಥಿಗಳು ಆನ್ಲೈನ್ ಮೂಲಕ ಹೊರತುಪಡಿಸಿ ಇತರೆ ಯಾವುದೇ ಮಾದರಿಯಲ್ಲಿ ಅರ್ಜಿ ಹಾಕಲು ಅವಕಾಶ ಇಲ್ಲ. ಅಪ್ಲಿಕೇಶನ್ ಲಿಂಕ್ ಅನ್ನು ಮಾರ್ಚ್ 04 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಕ್ಟಿವೇಟ್ ಮಾಡಲಿದೆ. ನಂತರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರಲಿದ್ದು, ಆಸಕ್ತರು ಇಂದಿನಿಂದಲೇ ಸಕಲ ಸಿದ್ಧತೆ ನಡೆಸಿಕೊಳ್ಳಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *