ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಲ್ಲಿ ಬೀದಿ ದೀಪಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಧೀರಜ್ ಮುನಿರಾಜ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ನಗರಸಭೆ ಆವರಣದಲ್ಲಿಂದು ನಗರಸಭೆ ಆಡಳಿತಕ್ಕೆ ಎಲ್ ಇಡಿ ಬೀದಿ ದೀಪಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
2023-24ರ ಶಾಸಕರ ನಿಧಿ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸುಮಾರು 1000 ಬೀದಿ ದೀಪಗಳನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ, ಪೌರಾಯುಕ್ತ ಕಾರ್ತಿಕೇಶ್ಚರ್, ನಗರಸಭೆ ಸಮ್ಮುಖದಲ್ಲಿ ನಗರಸಭೆ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದರು.
ಪ್ರತಿ ವಾರ್ಡ್ ಗೆ 30 ಬೀದಿ ದೀಪಗಳನ್ನು ನೀಡಲು ಸೂಚಿಸಲಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಾರ್ಡ್ ಗಳಿಗೆ ಎಲ್ ಇಡಿ ಬೀದಿ ದೀಪಗಳನ್ನು ವಿತರಿಸಿರುವುದಕ್ಕೆ ನಗರಸಭಾ ಸದಸ್ಯರು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಧೀರಜ್ ಮುನಿರಾಜ್ ಅವರಿಗೆ ಅಭಿನಂದನೆಗಳನ್ನು ಸಹ ಸಲ್ಲಿಸಿದರು.
ಈ ವೇಳೆ ನಗರಸಭೆ ಸದಸ್ಯರಾದ ಬಂತಿ ವೆಂಕಟೇಶ್, ಶಿವು, ಭಾಸ್ಕರ್, ವತ್ಸಲಾ, ವಡ್ಡರಹಳ್ಳಿ ರವಿ, ಪದ್ಮನಾಭ್, ಲಕ್ಣ್ಮೀಪತಿ, ನಾಗರತ್ನ, ಹಂಸಪ್ರಿಯಾ, ಹಸೀನಾ ತಾಜ್, ಪ್ರಭಾನಾಗಾರಜ್, ನಾಗರತ್ನಮ್ಮ, ಇಂದ್ರಾಣಿ, ಆದಿಲಕ್ಷ್ಮಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.