ಬ್ಯಾಂಕಾಕ್‌ನಿಂದ ಹತ್ತು ಜೀವಂತ ಅನಕೊಂಡ ಮರಿಗಳನ್ನು ಅಕ್ರಮವಾಗಿ ಬ್ಯಾಗ್ ನಲ್ಲಿ ಹೊತ್ತು ತರುತ್ತಿದ್ದ ಏರ್ ಪ್ರಯಾಣಿಕನನ್ನು ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಯಾಣಿಕರ ಸೂಟ್‌ಕೇಸ್ ಅನ್ನು ಪರಿಶೀಲಿಸಿದಾಗ ಬಿಳಿ ಚೀಲದಲ್ಲಿ ಹತ್ತು ಜೀವಂತ ಅನಕೊಂಡಗಳು ಕಂಡುಬಂದಿವೆ.
ಕೂಡಲೇ ಪ್ರಯಾಣಿಕನನ್ನು ಬಂಧಿಸಿ ಹಾವು ಮರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಕಳ್ಳಸಾಗಣೆ ನಿಷೇಧ ಕಾಯ್ದೆ ಮತ್ತು ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.