ಫೆ.2ರ ರಾತ್ರಿ ಕಳ್ಳರು ತಮ್ಮ ಮನೆಯ ಮುಂದೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಇಟ್ಟಿದ್ದ ರಾಗಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಗುಬ್ಬಿ ತಾಲ್ಲೂಕು ಹೇರೂರು ಗ್ರಾಮದ ರಾಜೇಶ್ ಎಂಬಾತ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿಗಳಾದ ಗುಬ್ಬಿ ಟೌನ್ ನಿವಾಸಿ ಪ್ರಶಾಂತ್ ಕುಮಾರ್ ಮತ್ತು ಸಾತೇನಹಳ್ಳಿ ಗ್ರಾಮದ ರಾಜ ಇವರನ್ನು ಫೆ. 2ರಂದು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ರಾಗಿ ಕದ್ದಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳಿಂದ 1,55 ಲಕ್ಷ ರೂ. ಬೆಳೆ ಬಾಳುವ 3,713 ಕೆ ಜಿ ರಾಗಿಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ ಹಾಗೂ ಒಟ್ಟು 02 ಪ್ರಕರಣಗಳನ್ನು ಭೇದಿಸಲು ಗುಬ್ಬಿ ಪೊಲೀಸ್ ಯಶಸ್ವಿಯಾಗಿರುತ್ತಾರೆ.