ಹ್ಯಾಂಡ್ ಬಾಲ್ ಗೇಮ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹೆಡ್ ಕಾನ್ಸ್ ಟೇಬಲ್ ಪುತ್ರಿ ಪ್ರೇರಣಾ ಯಾದವ್..!

ಹ್ಯಾಂಡ್ ಬಾಲ್ ಗೇಮ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಸ್ಕೂಲ್ ಗೇಮ್ಸ್ ಪೆಢರೇಷನ್ ಆಪ್ ಇಂಡಿಯಾಗೆ ಪ್ರೇರಣಾ ಯಾದವ್.C ಆಯ್ಕೆ ಆಗುವ ಮೂಲಕ ಸಾಧನೆ ಮಾಡಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ BS. ಚಂದ್ರಶೇಖರ್ ಪುತ್ರಿಯಾದ ಇವರು ಯಲಹಂಕ CRPF ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಅಕ್ಟೋಬರ್ 2023-24 ಸಾಲಿನಲ್ಲಿ 17 ವರ್ಷದ ಒಳಗಿನ ಬಾಲಕಿಯರ ವಿಭಾಗದಿಂಸ 52 ನೇ  KV ನ್ಯಾಷನಲ್ ಮತ್ತು ರೀಜನಲ್ ಸ್ಪೋರ್ಟ್ಸ್ ಮೀಟ್ ನಲ್ಲಿ ಪ್ರೇರಣಾ ಯಾದವ್ ಭಾಗವಹಿಸಿ ಹ್ಯಾಂಡ್ ಬಾಲ್ ಗೇಮ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ SGFI ಗೆ ಆಯ್ಕೆ ಯಾಗಿದ್ದಾರೆ..

ದೆಶದ ಎಲ್ಲಾ ರಾಜ್ಯಗಳಿಂದ 17 ವರ್ಷದ ಒಳಗಿನ ಬಾಲಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದ ಕೂಡ ಹಲವು ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರೇರಣಾ ಯಾದವ್  ಉತ್ತಮ ಪ್ರದರ್ಶನ ನೀಡಿ ಕೀರ್ತಿ ತಂದಿದ್ದಾರೆ..

Leave a Reply

Your email address will not be published. Required fields are marked *