ನಗರದ 29ನೇ ಡಿವಿಜನ್ ಭೋವಿ (ವಡ್ಡರ)ಪೇಟೆಯಲ್ಲಿನ ಶ್ರೀ ಶ್ರೀ ಭೂನೀಳಾಸಮೇತ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೋಳಿ (ಕದರಿ) ಹುಣ್ಣಿಮೆ ಪ್ರಯುಕ್ತ ಮಾ.13, 14ರಂದು ಲೋಕಕಲ್ಯಾಣಾರ್ಥ ಶ್ರೀ ಭೂನೀಳಾಸಮೇತ “ಶ್ರೀ ಲಕ್ಷ್ಮೀನರಸಿಂಹಸ್ವಾಮಿ ತಿರುಕಲ್ಯಾಣೋತ್ಸವ” ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಮಾ.13ರ ಬೆಳಿಗ್ಗೆ 6-00 ಗಂಟೆಗೆ ಸುಪ್ರಭಾತ ಸೇವೆ, ಶ್ರೀ ವಿಶ್ವಸೇನ ಪೂಜೆ, ಶ್ರೀ ಭಗವತ್ ವಾಸುದೇವ ಪುಣ್ಯಾಹ ವಾಚನ, ಶ್ರೀ ಮಹಾಲಕ್ಷ್ಮೀನರಸಿಂಹಸ್ವಾಮಿ ಪ್ರಧಾನ ಕಳಸ ಸ್ಥಾಪನೆ, ಸಕಲ ಇಷ್ಟಾರ್ಥ ಸಿದ್ದಿ ಶ್ರೀ ಲಕ್ಷ್ಮೀನರಸಿಂಹ ಪ್ರಧಾನ ಹೋಮ, ಮಹಾಸುದರ್ಶನ ಹೋಮ, ಶಾಂತಿ ಹೋಮ, ಪೂರ್ಣಾಹುತಿ ನಡೆಸಲಾಯಿತು.
ಮಧ್ಯಾಹ್ನ 12-30 ಗಂಟೆಗೆ ಮಂತ್ರ ಪುಷ್ಪ ಶಾತುಮುರೈ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6-00 ಗಂಟೆಗೆ ವೇದ-ಸ್ತೋತ್ರ-ಪ್ರಬಂಧ ಪಾರಾಯಣ ಶ್ರೀ ಮಹಾಲಕ್ಷ್ಮೀ ಪ್ರಧಾನ ಹೋಮ, ಮಹಾಪೂರ್ಣಾಹುತಿ ರಾತ್ರಿ 8-00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಮಾ.14ರ ಬೆಳಿಗ್ಗೆ 6-00 ಗಂಟೆಗೆ ಸುಪ್ರಭಾತ ಸೇವೆ, ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ. ಬೆಳಿಗ್ಗೆ 9-00 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ಮಧ್ಯಾಹ್ನ 12-00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ. ಲೋಕಕಲ್ಯಾಣಾರ್ಥ ಶ್ರೀ ಭೂನೀಳಾಸಮೇತ “ಶ್ರೀ ಲಕ್ಷ್ಮೀನರಸಿಂಹಸ್ವಾಮಿ ತಿರುಕಲ್ಯಾಣೋತ್ಸವ”. ರಾತ್ರಿ 8ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಲಕ್ಷ್ಮೀನರಸಿಂಹಸ್ವಾಮಿ ತಿರುಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಸೇರಿದಂತರ ರಾಜಕೀಯ ಮುಖಂಡರು, ಸ್ಥಳೀಯ ನಿವಾಸಿಗಳು, ಭಕ್ತಾಧಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.