ಹೋಟೆಲ್ ನಲ್ಲಿ ತಂಗಿದ್ದ ಪ್ರೇಮಿಗಳ ಖಾಸಗಿತನವನ್ನ ಕದ್ದು ಮುಚ್ಚಿ ವಿಡಿಯೋ ರೆಕಾರ್ಡ್ ಮಾಡಿ ಒಂದು ಲಕ್ಷಕ್ಕೆ ಬೇಡಿಕೆ ಇಟ್ಟು ಪೊಲೀಸರಿಗೆ ಸಿಕ್ಕಿಬಿದ್ದ ಮಂಗಳೂರು ಲಂಚ್ ಹೋಮ್ ಹೋಟೆಲ್ ನಡೆಸುತ್ತಿದ್ದ ಪಾಟ್ನಾರ್ಸ್.
ಹೋಟೆಲ್ ಗೆ ಬರುತ್ತಿದ್ದ ಯುವತಿ ಖಾಸಗಿ ಫೊಟೋ, ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವುದು ಎಂದು ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ವಾಸವಿದ್ದ 22 ವರ್ಷದ ಎಂಬಿಎ ವಿದ್ಯಾರ್ಥಿನಿಗೆ ಪ್ರತಿನಿತ್ಯ ಬ್ಲಾಕ್ ಮೇಲ್ ಮಾಡುತ್ತಿದ್ದ ಮಂಗಳೂರು ಲಂಚ್ ಹೋಮ್ ಪಾಟ್ನಾರ್ಸ್.
ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಯುವತಿ. ದೂರಿನ ಮೇರೆಗೆ ಲಂಚ್ ಹೋಮ್ ಹೋಟೆಲ್ ನಡೆಸುತ್ತಿದ್ದ ನಯನ ಮತ್ತು ಕಿರಣ್ ರನ್ನ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.