ಹೊಸ ವರ್ಷ ಹಿನ್ನೆಲೆ ಶಾಸಕ ಎಂಎಲ್ಸಿಯಿಂದ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕೋಲಾರ: ಕಳೆದ ವರ್ಷವು ಜನತೆಗೆ ಅಷ್ಟೇನೂ ಯಶಸ್ವಿಯಾಗಲಿಲ್ಲ ಈ ಬಾರಿಯ 2025 ರ ವರ್ಷವೂ ಎಲ್ಲಾ ಕಾರ್ಯಗಳನ್ನು ಯಶಸ್ವಿಗೊಳಿಸಲಿದೆ ಎಂದು ಗುಂಟೂರು ಪಂಚಾಂಗವೇ ಹೇಳಿದ್ದು ಅದರಂತೆ ಈ ವರ್ಷವು ಯಶಸ್ಸು ಕಾಣುವಂತೆ ದೇವರು ಆಶೀರ್ವಾದ ನೀಡುವಂತಾಗಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಹೊಸ ವರ್ಷದ ಪ್ರಯುಕ್ತ ನಗರದ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕೋಲಾರ ಜಿಲ್ಲೆಯಲ್ಲಿರುವ ಚಿಕ್ಕ ತಿರುಪತಿ ವೆಂಕಟರಮಣಸ್ವಾಮಿ, ಮುಳಬಾಗಿಲು ಆಂಜನೇಯಸ್ವಾಮಿ, ನಗರದ ಕೋಲಾರಮ್ಮ ಸೋಮೇಶ್ವರ, ನಲ್ಲಗಂಗಮ್ಮ, ಸೀತಿ ಭೈರವೇಶ್ವರ ದೇವಾಲಯಗಳು ಜಿಲ್ಲೆಯ ಜನರನ್ನು ಕಾಪಾಡವ ದೇವರುಗಳು ಅವರ ಸಮ್ಮುಖದಲ್ಲಿ ರೈತರಿಗೆ ಉದ್ಯಮಿಗಳಿಗೆ ಸರ್ಕಾರಿ ನೌಕರರಿಗೆ ಎಲ್ಲರಿಗೂ ಒಳ್ಳೆಯದು ಮಾಡಿ ರೈತರಿಗೆ ಉತ್ತಮ ಮಳೆ ಬೆಳೆ ಯಾಗುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಜಿಪಂ ಕಾರ್ಯದರ್ಶಿ ಶಿವಕುಮಾರ್ ತಹಶಿಲ್ದಾರ್ ಎಂ.ನಯನ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಛತ್ರಕೋಡಿಹಳ್ಳಿ ಮಂಜುನಾಥ್, ಮುಖಂಡರಾದ ನುಕ್ಕನಹಳ್ಳಿ ಶ್ರೀನಿವಾಸ್, ಜನಪನಹಳ್ಳಿ ನವೀನ್, ಜಾಲಿ ಬಾನು, ಅಧಿಕಾರಿಗಳು ಇದ್ದರು

Leave a Reply

Your email address will not be published. Required fields are marked *

error: Content is protected !!