
ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮದಲ್ಲಿರುವ ರವಿಕುಮಾರ್ ಎಂಬ ಹೊಸ ಮನೆ ಗೃಹ ಪ್ರವೇಶ ಸಂದರ್ಭದಲ್ಲಿ ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಸ್ಫೋಟಗೊಂಡು ಸುಮಾರು 6 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಳೆದ ರಾತ್ರಿ ಸುಮಾರು 11ಗಂಟೆಯಲ್ಲಿ ನಡೆದಿದೆ.
ನಿನ್ನೆ ಗೃಹ ಪ್ರವೇಶವಿದ್ದು, ಗೃಹಪ್ರವೇಶ ಮುಗಿದ ನಂತರ ಕಳೆದ ರಾತ್ರಿ ಅಡುಗೆ ಮಾಡಲು ತಂದಿದ್ದ ಗ್ಯಾಸ್ ಲೀಕ್ ಆಗಿದೆ. ಗ್ಯಾಸ್ ಲೀಕ್ ತೀವ್ರತೆ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಮನೆಯಲ್ಲಿದ್ದರಿಗೆ ಗಂಭೀರಗಾಯಗಳಾಗಿವೆ ಎಂದು ತಿಳಿದುಬಂದಿದೆ.
ರವಿಕುಮಾರ್ (41), ವರ್ಷಿತಾ (21), ಅನುಸೂಯಾ (37), ಭಾಗ್ಯಮ್ಮ (55), ಚಿರಂತ್ (11), ಮಿತುನ್ (14) ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….