ಹೊಸಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವರ್ಗಾವಣೆ

ಹೊಸಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ವರ್ಗಾವಣೆಗೊಂಡಿದ್ದಾರೆ.

ಬೆಂಗಳೂರು ನಗರದ ಜಯನಗರದಲ್ಲಿರುವ ಬೆಸ್ಕಾಂ ಜಾಗೃತದಳಕ್ಕೆ ವರ್ಗಾವಣೆ ಆಗಿದ್ದಾರೆ.

ರಾವ್ ಗಣೇಶ್ ಜನಾರ್ಧನ್ ಅವರು ಹೊಸಹಳ್ಳಿ ಪೊಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಆಗಿ ಬಂದಾಗಿನಿಂದಲೂ ಠಾಣೆಗೆ ಹೊಸ ರೂಪ ಕೊಡಲು ಮುಂದಾಗಿದ್ದರು. ಪೊಲೀಸ್ ಠಾಣೆಯನ್ನು ಮಾದರಿ, ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿಸಲು ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ಅವಿರತವಾಗಿ ಪ್ರಯತ್ನ ಪಟ್ಟಿದ್ದರು.

ಮೊದಲು ಠಾಣಾ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಹುಳ-ಹುಪ್ಪಟೆ, ಹಾವುಗಳ ತಾಣವಾಗಿತ್ತು. ಇದೀಗ ಠಾಣಾ ಸುತ್ತಮುತ್ತ ಇರುವ ಗಿಡಗಂಟಿಗಳನ್ನು ತೆರವುಗೊಳಿಸಿ ಹೂ, ಹಣ್ಣು ನೆರಳು ಕೊಡುವ ಸಸಿಗಳನ್ನು ನೆಟ್ಟು, ಸಸಿಗಳಿಗೆ ನಿತ್ಯ ನೀರು ಸರಬರಾಜುಗಾಗಿ ಈಗಾಗಲೇ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದು, ಜೊತೆಗೆ ಸ್ಪ್ರಿಂಕ್ಲರ್ ಕೂಡ ಅಳವಡಿಸುವ ಮೂಲಕ ಪರಿಸರ ಸ್ನೇಹಿ ಠಾಣೆಯನ್ನಾಗಿಸಿದ್ದರು.

ಒಳಿತು,‌ ನ್ಯಾಯ ಯಾರಿಗೆ ತಾನೆ ಬೇಡ? ಅದು ಎಲ್ಲರಿಗೂ ಬೇಕಷ್ಟೆ. ಅದರಲ್ಲೂ ನಮ್ಮ ಸದ್ಯದ ಕಾಲಕ್ಕಂತೂ ಇದು ತುಂಬ ತುರ್ತಾಗಿ ಬೇಕಾಗಿದೆ. ಒಳಿತು ಎಂದರೆ ಯಾವುದು? ಮಂಗಳಕರವಾದದ್ದೇ ಒಳಿತು. ಎಲ್ಲರ ಹಿತವನ್ನು ಎತ್ತಿಹಿಡಿಯುವಂಥದ್ದೇ ‘ಮಂಗಳ’. ಒಳಿತು, ನ್ಯಾಯ, ಶಾಂತಿ, ಶುಭ್ರತೆ, ಮಂಗಳದ ಸಂಕೇತವೇ ಬುದ್ಧ. ಈ‌‌ ಬುದ್ಧನ ಪ್ರತಿಮೆಯನ್ನು ಠಾಣಾ ಆವರಣದಲ್ಲಿ ಪ್ರತಿಷ್ಟಾಪಿಸಿ ಠಾಣೆಗೆ ಬಂದವರಿಗೆ ನ್ಯಾಯ, ಶಾಂತಿ, ಒಳಿತನ್ನು ನೀಡಲು ಪ್ರಯತ್ನಿಸಲಾಗುವುದು ಎಂಬುದನ್ನು ಪರೋಕ್ಷವಾಗಿ ಸಂದೇಶ ನೀಡಿದ್ದರು.

ಠಾಣೆಯ ಕಾಂಪೌಂಡ್ (ಗೋಡೆ) ಮೇಲೆ ಪೊಲೀಸ್ ವ್ಯವಸ್ಥೆ ಬಗೆಗಿನ ಚಿತ್ರಗಳನ್ನು ಪೇಂಟಿಂಗ್ ಮಾಡಿಸಿದ್ದರು. ನೆರಳಲ್ಲಿ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಠಾಣೆಯನ್ನಾಗಿ ಮಾರ್ಪಾಡಿಸಿದ್ದರು.

ಈ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಪತ್ತೆಹಚ್ಚುವ ಸಲುವಾಗಿ ಕೆಲವು ಸೂಕ್ಷ್ಮ‌, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ಸುಮಾರು 23 ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.

ಠಾಣಾ ವ್ಯಾಪ್ತಿಯ ವಿವಿಧ ಕೂಡು ರಸ್ತೆ, ಪ್ರಮುಖ ವೃತ್ತಗಳು, ಶಾಲಾ ಆವರಣ, ಕವಲು ರಸ್ತೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.

ಹೊಸಹಳ್ಳಿ ಗ್ರಾಮ ಪಂಚಾಯಿತಿ, ಅರೂಢಿ ಗ್ರಾಮ ಪಂಚಾಯಿತಿ, ದಾನಿಗಳು ಮತ್ತು ಸ್ಥಳೀಯ ಮುಖಂಡರುಗಳು ಸಿಸಿಟಿವಿ ಕ್ಯಾಮೆರಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಠಾಣಾ ವ್ಯಾಪ್ತಿಯ ದೊಡ್ಡಹಳ್ಳ ರಸ್ತೆ, ಇತರೆ‌ ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ಕಾರಣದಿಂದ ಮಣ್ಣು ಕೊಚ್ಚಿ ಹೋಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದ್ದರಿಂದ ರಸ್ತೆಯ ಬದಿಯ ಗುಂಡಿಗಳಿಗೆ ಮಣ್ಣು ತುಂಬಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ಹೊಸಹಳ್ಳಿ-ದೊಡ್ಡಬಳ್ಳಾಪುರ ರಸ್ತೆಯ ಘಾಟ್ ಪ್ರದೇಶದಲ್ಲಿ ಇತ್ತೀಚೆಗೆ ಅಪಘಾತಗಳು ಸಂಭವಿಸುತ್ತಿದ್ದು, ಅಂತಹ ಅಪಘಾತಗಳನ್ನು ತಡೆಯುವ ಸಲುವಾಗಿ ರಾತ್ರಿವೇಳೆ ಸಂಚರಿಸುವ ವಾಹನಗಳ ಚಾಲಕರಿಗೆ ಗೋಚರಿಸುವಂತೆ ರಸ್ತೆಯ ತಿರುವುಗಳಲ್ಲಿ ರಿಫ್ಲೆಕ್ಟರ್ ಗಳನ್ನು ಅಳವಡಿಸಿದ್ದಾರೆ.

ಅದೇರೀತಿ‌ ಉತ್ತಮ ಕಾರ್ಯದಕ್ಷತೆ ತೋರಿದ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗೆ ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕ (DG&IGP)ರ ಹೆಸರಿನಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಪ್ರಶಂಸನಾ ಸೇವಾ ಪದಕಕ್ಕೆ 200 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಆಯ್ಕೆಯಾಗಿದ್ದರು. ಅದರಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಭಾಜನರಾಗಿದ್ದರು.

ಅದೇರೀತಿ ಇವರಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದ್ದಾರೆ.

ಒಟ್ಟಿನಲ್ಲಿ, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ಜನರಿಗೆ ನ್ಯಾಯ ಒದಗಿಸಿಕೊಡುವುದಲ್ಲದೇ ತಾನು ಕೆಲಸ ಮಾಡುವ ಠಾಣೆಯನ್ನೂ ಅಭಿವೃದ್ಧಿಪಡಿಸುವಲ್ಲೂ ಮುಂದೆ ಇದ್ದರು. ಜನ ಸ್ನೇಹಿ, ಪರಿಸರ ಸ್ನೇಹಿ, ಸಿಬ್ಬಂದಿ ಸ್ನೇಹಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

Ramesh Babu

Journalist

Recent Posts

ಮೋರಿ ಬಳಿ ತ್ಯಾಜ್ಯ ರಾಶಿ; ದುರ್ವಾಸನೆ, ಸೊಳ್ಳೆ ಕಾಟಕ್ಕೆ ವಿನಾಯಕನಗರ ನಿವಾಸಿಗಳ ಪರದಾಟ

ದೊಡ್ಡಬಳ್ಳಾಪುರ: ನಗರದ ವಿನಾಯಕನಗರದ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದಲ್ಲಿರುವ ರಾಜಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಮೋರಿ ಬಳಿ ತ್ಯಾಜ್ಯ ರಾಶಿ ಬಿದ್ದಿದ್ದು,…

36 minutes ago

ನೀರಾವರಿ ಯೋಜನೆಗಳ ಕಾಮಗಾರಿ ವಿಳಂಬ ಸಹಿಸುವುದಿಲ್ಲ- ಸಚಿವ ಎನ್ ಚಲುವರಾಯಸ್ವಾಮಿ

ರಾಜ್ಯದ ನೀರಾವರಿ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ರೈತರಿಗೆ ಯೋಜನೆಗಳ ಸಂಪೂರ್ಣ ಪ್ರಯೋಜನ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಬದ್ಧತೆಯಿಂದ…

4 hours ago

ಇಂದು (ಸೆ.8) ದೊಡ್ಡಬಳ್ಳಾಪುರದ ಹಲವೆಡೆ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8ರಂದು ನಗರದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ…

4 hours ago

ಶ್ರಾವಣ ಮಾಸದ ಕೊನೆಯ ಸೋಮವಾರ: ದಿನ್ನೆ ಬಯಲು ಬಸವಣ್ಣ ದೇವಾಲಯದಲ್ಲಿ ಹೂವಿನ ಆರತಿ ಸೇವೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಎಸ್.ಎಂ.ಗೊಲ್ಲಹಳ್ಳಿ ಗ್ರಾಮದ ದಿನ್ನೆ ಬಯಲು ಬಸವಣ್ಣ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ವಿಶೇಷ ಪೂಜೆ…

17 hours ago

ಅಗ್ನಿ ಅವಘಡದ ವೇಳೆ ತುರ್ತು ಕ್ರಮಗಳ ಕುರಿತು ಅಣಕು ಪ್ರದರ್ಶನ: ಯುವ ಆಪ್ತಮಿತ್ರ ತರಬೇತಿ ಶಿಬಿರದಲ್ಲಿ ರೋವರ್ಸ್–ರೇಂಜರ್ಸ್‌ಗೆ ಜಾಗೃತಿ

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ವತಿಯಿಂದ ಹಮ್ಮಿಕೊಂಡಿರುವ ‘ಯುವ ಆಪ್ತಮಿತ್ರ’ ತರಬೇತಿ ಶಿಬಿರದ ಅಂಗವಾಗಿ ನಗರದ…

19 hours ago

ಘಾಟಿ ಸುಬ್ರಹ್ಮಣ್ಯ ತೇರಿನ ಬೀದಿಯಲ್ಲಿದ್ದ ಪೂಜಾ ಸಾಮಗ್ರಿ ಅಂಗಡಿಗಳ ತೆರವು

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿರುವ ತೇರಿನ ಬೀದಿಯ ಇಕ್ಕೆಲಗಳಲ್ಲಿ ಇಟ್ಟುಕೊಂಡಿದ್ದ ಪೂಜಾ ಸಾಮಗ್ರಿ ಅಂಗಡಿಗಳನ್ನು…

1 day ago