ಹೊಸಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ ಶಾಲಾ ಮಕ್ಕಳ ಜೊತೆ ಸಸಿ ನೆಟ್ಟು ನೀರೆರೆದ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್

ವಿಶ್ವ ಪರಿಸರ ದಿನದ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ, ಹೊಸಹಳ್ಳಿ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳ ಸಹಯೋಗದೊಂದಿಗೆ ವಿವಿಧ ಜಾತಿಯ ಗಿಡ, ಸುಂದರ ಉದ್ಯಾನವನಕ್ಕಾಗಿ ವಿವಿಧ ರೀತಿಯ ಹೂವು ಬಿಡುವ ಗಿಡಗಳು, ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು.

ಸಸಿಗಳಿಗೆ ನಿತ್ಯ ನೀರು ಸರಬರಾಜುಗಾಗಿ ಈಗಾಗಲೇ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದು, ಜೊತೆಗೆ ಸ್ಪ್ರಿಂಕ್ಲರ್ ಅಳವಡಿಸುವ ಮೂಲಕ ಠಾಣಾ ನಿರೀಕ್ಷಕರಾದ ರಾವ್ ಗಣೇಶ್ ಜನಾರ್ಧನ್, ಉಪ ನಿರೀಕ್ಷಕರಾದ ರವಿ ಮಳಗಲಿ ಮತ್ತು ಠಾಣಾ ಸಿಬ್ಬಂದಿಯವರು ಪರಿಸರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಿದರು.

Leave a Reply

Your email address will not be published. Required fields are marked *

error: Content is protected !!