ಹೊಸಕೋಟೆಯಲ್ಲಿ ಬಾಲ್ಯ ವಿವಾಹಕ್ಕೆ ಯತ್ನ: ಹರಿಶಿನ ಶಾಸ್ತ್ರ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ದಾಳಿ: ಮದುವೆ ರದ್ದುಪಡಿಸಿ ಬಾಲಕಿಯನ್ನ ವಶಕ್ಕೆ ಪಡೆದು ಮಹಿಳಾ ಕೇಂದ್ರಕ್ಕೆ ರವಾನೆ:ಪೋಷಕರ ವಿರುದ್ದ ಪ್ರಕರಣ ದಾಖಲು

 

15 ವರ್ಷದ ಬಾಲಕಿಗೆ ಮದುವೆ ಮಾಡಲು ಪೋಷಕರು ಯತ್ನ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಖಾಸಗಿ ಭವನದಲ್ಲಿ ನಡೆದಿದೆ

ಆರತಕ್ಷತೆ ಮುಗಿಸಿ ಮದುವೆಗೆ ಹರಿಶಿನ ಶಾಸ್ತ್ರ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ‌ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಪರೀಶಲನೆ ಮಾಡಿ ಮದುವೆ ನಿಲ್ಲಿಸಿದ್ದಾರೆ.

ಬಾಲಕಿಯನ್ನ ವಶಕ್ಕೆ ಪಡೆದು ಮಹಿಳಾ ಕೇಂದ್ರಕ್ಕೆ ಕರೆತರಲಾಗಿದೆ. ಪೋಷಕರ ವಿರುದ್ದ ಬಾಲ್ಯ ವಿವಾಹ ನಿಷೇದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!