
ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ರತ್ನಮ್ನ (62), ಮೃತಪಟ್ಟ ಮಹಿಳೆ.
ತೋಟದ ಬಳಿ ಮೇಕೆ ಮೇಯಿಸಲು ಬಂದಿದ್ದ ಮಹಿಳೆ. ದಿಢೀರನೆ ಗಾಳಿ, ಸಿಡಿಲು ಸಮೇತ ಮಳೆ ಬಂದಿದೆ. ಆಗ ಅಲ್ಲೇ ಇದ್ದ ಬೇವಿನ ಮರದಡಿ ಮೇಕೆಗಳ ಜೊತೆ ಮಹಿಳೆ ನಿಂತಿಕೊಂಡಿದ್ದಾರೆ. ಗಾಳಿ ಮಳೆಯ ಆರ್ಭಟದ ಜೊತೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ದಿ ತಿಳಿದ ಕೂಡಲೇ ಶಾಸಕ ಶರತ್ ಬಚ್ಚೇಗೌಡ ಮಾರ್ಗದರ್ಶನದಂತೆ ಸ್ಥಳಕ್ಕೆ ಪ್ರತಿಭಾ ಅವರು ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ಸಹಾಯ ಮಾಡಿದ್ದಾರೆ.