ಹೊಲದಲ್ಲಿದ್ದ ರಾಗಿ ಹುಲ್ಲಿಗೆ ಬೆಂಕಿ: ರೈತ ಕಂಗಾಲು.!

ಅ ಭಾಗದ ಜನ್ರು ವರ್ಷಕ್ಕೊಮ್ಮೆ ರಾಗಿ ಬೆಳೆ ಬೆಳೆದು ವರ್ಷಪೂರ್ತಿ ಹೊಟ್ಟೆ ತುಂಬಿಸಿಕೊಳ್ಳುವ ರೈತರು.. ರಾಗಿಯಿಂದ ಬೇರ್ಪಡಿಸಿದ ಹುಲ್ಲುನ್ನು ರೈತರು ಬೇಸಿಗೆ ಕಾಲದಲ್ಲಿ ಹಸು – ದನಗಳಿಗೆ ಹಾಕಿ ಹೈನುಗಾರಿಕೆ ಮಾಡಿಕೊಳ್ಳುತ್ತಾರೆ… ಅದ್ರೆ ರೈತನ ಜಮೀನಿನಲ್ಲಿ ಕಾಟಾವ್ ಮಾಡಿ ಬಿಟ್ಟಿದ್ದ ರಾಗಿ ಹುಲ್ಲಿಗೆ ಬೆಂಕಿ ಬಿದ್ದು ರೈತನ ಹಸುಗಳ ವರ್ಷದ ಕೂಳು ಅರ್ಧ ಗಂಟೆಯಲ್ಲಿ ಸುಟ್ಟು ಭಸ್ಮವಾಗಿದೆ ಅದೇಲ್ಲಿ ಅಂತೀರಾ ಈ ವರದಿ ‌ನೋಡಿ…

ಹೀಗೆ ರಾಗಿ ಹುಲ್ಲಿಗೆ ಬೆಂಕಿ ಕಿಡಿ ಬಿದ್ದು ಧಗ ಧಗನೆ ಉರಿಯುತ್ತಿರುವ ಬೆಂಕಿ.. ಇನ್ನೊಂದು ಕಡೆ ಅಯ್ಯೋ ಹಸುಗಳ ವರ್ಷದ ಕೂಳು ಹಾಳಾಯಿತು.. ಏನ್ ಮಾಡ್ಲಿ ಅಂತ ಅಸಹಾಯಕತೆಯಿಂದಿರುವ ರೈತ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲ್ಲೂಕಿನ ಅರಸನಹಳ್ಳಿ ಗ್ರಾಮದಲ್ಲಿ…

ಅರಸನಹಳ್ಳಿ ಗ್ರಾಮದ ರೈತ ಮಂಜುನಾಥ್ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ರಾಗಿ ಬೆಳೆಯನ್ನಿಟ್ಟಿದ್ದರು.. ಒಳ್ಳೆಯ ಮಳೆ ಬೆಳೆಯಾಗಿ ಇತ್ತೀಚೆಗಷ್ಟೇ ರಾಗಿ ಯಂತ್ರದಿಂದ ಕಟಾವು ಮಾಡಿದ ರಾಗಿಯ ಹುಲ್ಲು‌ ಚೆನ್ನಾಗಿ ಒಣಗಲೆಂದು ಜಮೀನಿನಲ್ಲೆ ಬಿಟ್ಟಿದ್ದರು.. ಈಗಿರುವಾಗ ಹಸುಗಳ ಮೇವಿಗೆ ಹೊಲದಲ್ಲಿ ಸಂಗ್ರಹಿಸಿಟ್ಟಿದ್ದ ರಾಗಿ ಹುಲ್ಲಿಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಭಾರೀ ನಷ್ಟ ಸಂಭವಿಸಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದು ಕಟಾವು ಮಾಡಿದ್ದ ರಾಗಿ ಹುಲ್ಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಜಾನುವಾರುಗಳ ಮೇವುಗಾಗಿ ವರ್ಷಪೂರ್ತಿ ಬಳಸುವ ಉದ್ದೇಶದಿಂದ ಸಂಗ್ರಹಿಸಿದ್ದ ಹುಲ್ಲು ಬೆಂಕಿಗಾಹುತಿಯಾಗಿದೆ.

ಇನ್ನೂ ರೈತ ಮಂಜುನಾಥ್ ಜಮೀನಿನಲ್ಲಿರುವ ರಾಗಿ‌ ಹುಲ್ಲಿಗೆ ಬೆಂಕಿ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದಾರೆ ಅಷ್ಟೊತ್ತಿಗೆ ರಾಗಿ ಹುಲ್ಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು ಅದ್ರೆ ಬೆಂಕಿ ಹೇಗೆ ಉಂಟಾಯಿತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆಯಿಂದ ರೈತ ಮಂಜುನಾಥ್ ಆರ್ಥಿಕವಾಗಿ ಕಂಗಾಲಾಗಿದ್ದು, ಹಸು–ದನಗಳಿಗೆ ಮೇವು ಇಲ್ಲದಂತಾಗಿದೆ.

ಇನ್ನೂ ರಾಗಿ ಬೆಳೆಯೇ ಈ ಭಾಗದ ರೈತರಿಗೆ ಆಹಾರ, ಹೈನುಗಾರಿಕೆ ಮತ್ತು ಜೀವನಾಧಾರ.

ಆದ್ರೆ ಒಂದೇ ಘಟನೆಯಲ್ಲಿ ರೈತನ ವರ್ಷದ ಶ್ರಮ ನೀರಿನಲ್ಲಿ ಹೋಮವಾದಂತಾಗಿದೆ. ಕೃಷಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!