Categories: ಲೇಖನ

ಹೊರ ಹೋಗುವುದು ದೊಡ್ಡ ಪ್ರಮಾಣದ ಹಣ – ಒಳ ಬರುವುದು ಚಿಲ್ಲರೆ ಹಣ…!

ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು……

ಆಧುನಿಕತೆ – ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ, ಸುಲಲಿತವಾಗಿ – ಸರಳವಾಗಿ ಕುಳಿತಲ್ಲಿಂದಲೇ ಹೇಗೆ ಬೇಕಾದರು, ಯಾರು ಬೇಕಾದರೂ ಹಣ ಖರ್ಚು ಮಾಡಬಹುದು. ನಮಗೆ ಬೇಕಾದ ವಸ್ತುಗಳನ್ನು, ಹೂಡಿಕೆಯನ್ನು, ಪಾವತಿಗಳನ್ನು, ವರ್ಗಾವಣೆಯನ್ನು ಮಾಡಬಹುದು ಮತ್ತು ಕೊಳ್ಳಬಹುದು. ಇದಕ್ಕೆ ಯಾವುದೇ ಶ್ರಮ ಬೇಕಿಲ್ಲ. ಒಂದು ಮೊಬೈಲಿನ ಮೂಲಕವೇ ಕೋಟ್ಯಾಂತರ ಹಣ ಖರ್ಚು ಮಾಡಬಹುದು. ಅದಕ್ಕಾಗಿ ಎಲ್ಲಾ ಬಗೆಯ ವೇದಿಕೆ – ಅವಕಾಶ – ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಹಣ ನಿಮ್ಮ ಬಳಿ ಇರಬೇಕಷ್ಟೇ…

ಆದರೆ, ಅದಕ್ಕೆ ವಿರುದ್ಧವಾಗಿ ಹಣ ಸಂಪಾದನೆಯ ಮಾರ್ಗಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಇಷ್ಟು ಸುಲಭವಾಗಿ, ಸರಳವಾಗಿ, ಯಾವುದೇ ಒತ್ತಡವಿಲ್ಲದೇ ಹಣವನ್ನು ಸಂಪಾದನೆ ಮಾಡಲು ಸಾಧ್ಯವೇ. ಹೌದು ಕೆಲವು ಅಪರೂಪದ ಜೂಜಿನಂತ ಸ್ವಲ್ಪ ಅಪಾಯಕಾರಿ ಟ್ರೇಡಿಂಗ್ ನಂತಹ ವ್ಯವಹಾರ ಹೊರತುಪಡಿಸಿ ಇತರೇ ವಹಿವಾಟು ಮಾಡಲು ಸಾಧ್ಯವೇ…..

ಬಹುಶಃ ಇಂದು ನಮ್ಮೆಲ್ಲರ ಬಹುದೊಡ್ಡ ಸವಾಲು ಇದೇ ಆಗಿದೆ. ಸಂಪಾದನೆ ಮತ್ತು ಲಾಭಗಳು ಕಡಿಮೆಯಾಗುತ್ತಾ, ಖರ್ಚುಗಳು ಹೆಚ್ಚಾಗುತ್ತಾ ಅವುಗಳ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಇದು ದಿನೇ ದಿನೇ ಅಧಿಕವಾಗುತ್ತಿದೆ…..

ಹಾಗೇ ಒಮ್ಮೆ 30/40 ವರ್ಷಗಳ ಹಿಂದಿನ ಜನಜೀವನದ ಬಗ್ಗೆ ಯೋಚಿಸಿ. ಮೊಬೈಲ್ ಇರಲಿಲ್ಲ. ಅದರ ಖರ್ಚು ಸಂಪೂರ್ಣ ಉಳಿತಾಯ. ಇಂದು ಅದು ಅನಿವಾರ್ಯ. ಟಿವಿ ಪ್ರಸಾರ ಉಚಿತವಾಗಿತ್ತು. ಬಟ್ಟೆಗಳು ಹಬ್ಬದ ಸಂದರ್ಭದಲ್ಲಿ ಮಾತ್ರ. ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಕಡಿಮೆ ದುಡ್ಡು. ಸಾಮಾನ್ಯ ಖಾಯಿಲೆಗೆ ಸರ್ಕಾರಿ ಆಸ್ಪತ್ರೆಗಳೇ ಸಾಕಾಗಿದ್ದವು. ನೀರಿಗೆ ಬಿಲ್ ಇರಲಿಲ್ಲ. ಹುಟ್ಟಿದ ಹಬ್ಬ, ಮದುವೆ ವಾರ್ಷಿಕೋತ್ಸವದ ನೆನಪುಗಳೇ ಇರುತ್ತಿರಲಿಲ್ಲ. ಮನೆಯ ಊಟವೇ ಹೆಚ್ಚು. ಹೋಟೆಲ್ ಮತ್ತು ಇತರ ಬೀದಿ ಬದಿಯ ತಿಂಡಿಗಳು ಅಪರೂಪ. ಫ್ರಿಡ್ಜ್, ವಾಶಿಂಗ್ ಮಿಷಿನ್, ವ್ಯಾಕ್ಯೂಮ್ ಕ್ಲೀನರ್, ಎಸಿ, ದ್ವಿಚಕ್ರ ವಾಹನ ಮುಂತಾದವುಗಳ ಅವಶ್ಯಕತೆಯೇ ಇರಲಿಲ್ಲ. ಈಗ ಹೀಗೇ ದಿನೇ ದಿನೇ ನಮ್ಮ ಅವಶ್ಯಕತೆಗಳು ಹೆಚ್ಚಾಗುತ್ತಲೇ ಇವೆ ಮತ್ತು ಅದನ್ನು ಮನೆ ಬಾಗಿಲಿಗೆ ಸಾಲದ ರೂಪದಲ್ಲಿ ಪೂರೈಸಲಾಗುತ್ತದೆ……

ಆದರೆ, ಸರ್ಕಾರಿ ಅಧಿಕಾರಿಗಳು ಮತ್ತು ಕೆಲವೇ ನಿರ್ದಿಷ್ಟ ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಮಧ್ಯಮ ವರ್ಗದ ಜನರ ವ್ಯಾಪಾರ ವಹಿವಾಟುಗಳ ಲಾಭದ ಪ್ರಮಾಣದಲ್ಲಿ ಸ್ಪರ್ಧೆಯ ಕಾರಣದಿಂದಾಗಿ ಕಡಿಮೆ ಆಗುತ್ತಲೇ ಇದೆ. ಜೊತೆಗೆ ಬೇರೆ ಬೇರೆ ಅನಿವಾರ್ಯ ಖರ್ಚುಗಳು ಅದಕ್ಕೆ ಜೊತೆಯಾಗುತ್ತಿದೆ……

ಹೊರ ಹೋಗುವುದು ದೊಡ್ಡ ಪ್ರಮಾಣದ ಹಣ – ಒಳ ಬರುವುದು ಚಿಲ್ಲರೆ ಹಣ ಎಂಬಂತಾಗಿದೆ. ಆದರೆ ಬೃಹತ್ ಉದ್ದಿಮೆಗಳಿಗೆ ಇದು ತದ್ವಿರುದ್ಧವಾಗಿ ಅಪಾರ ಲಾಭವನ್ನು ತಂದುಕೊಡುತ್ತಿದೆ……

ಅಂದರೆ, ಖರ್ಚುಗಳನ್ನು ಹೆಚ್ಚು ಮಾಡಿ ಆ ಹಣವನ್ನು ಕೆಲವೇ ವ್ಯಕ್ತಿಗಳು ಮತ್ತು ಕಂಪನಿಗಳು ಕೇಂದ್ರೀಕೃತ ಮಾಡಿಕೊಂಡು ಜನರ ಆರ್ಥಿಕ ಅಸಮಾನತೆಗೆ ಕಾರಣವಾಗಿ. ಅದೇ ಅಂಶಗಳು ಅವರ ಒಟ್ಟು ಜೀವನಮಟ್ಟ ಕುಸಿಯುವಂತೆ ಮಾಡಿವೆ. ಮಾನಸಿಕ ಮತ್ತು ದೈಹಿಕ ಅಸಹಿಷ್ಣತೆ ಉಂಟಾಗಿ ರೋಗಗಳ ಗೂಡಾಗುವಂತೆ ಮಾಡಿದೆ……

ಒಂದು ಅಧ್ಯಯನದ ಪ್ರಕಾರ, ಕುಟುಂಬವೊಂದು ಭಾರತದಲ್ಲಿ ಕಳೆದ 10/15 ವರ್ಷಗಳಲ್ಲಿ ಕುಟುಂಬಕ್ಕಾಗಿ ಖರ್ಚು ಮಾಡುವ ಹಣ ಎರಡು ಪಟ್ಟು ಹೆಚ್ಚಾಗಿದೆ ಹಾಗು ಅತಿಹೆಚ್ಚು ಹಣ ಖರ್ಚು ಮಾಡುವುದು ಶಿಕ್ಷಣ ಮತ್ತು ಆರೋಗ್ಯಕ್ಕೆ……..

ನೋಡಿ, ಇದು ನಮ್ಮ ನೇರ ಅರಿವಿಗೆ ಬಾರದೆ ಪರೋಕ್ಷವಾಗಿ ನಮ್ಮ ಜೇಬುಗಳಿಗೆ ಕತ್ತರಿ ಬೀಳುತ್ತಿದೆ…..

ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಜನರ ವಿವಿಧ ರೀತಿಯ ಪರದಾಟಗಳನ್ನು ನೋಡಿದಾಗ ಇದೆಲ್ಲಾ ಮನದ ಮೂಲೆಯಲ್ಲಿ ನೆನಪಾಗುತ್ತಿದೆ……

ಅಭಿವೃದ್ಧಿ ಎಂಬುದು ನಮ್ಮ ಬದುಕಿನ ನೆಮ್ಮದಿಯನ್ನು ನಾಶ ಮಾಡುತ್ತಾ, ಮೇಲ್ನೋಟಕ್ಕೆ ನಮ್ಮನ್ನು ವಸ್ತು ಸಂಸ್ಕೃತಿಯ ಶ್ರೀಮಂತರಂತೆ ಬಿಂಬಿಸುತ್ತಾ, ಕೊನೆಗೆ ಜೀವನದ ಬಗ್ಗೆಯೇ ಜಿಗುಪ್ಸೆ ಮೂಡುವಂತೆ ಮಾಡುತ್ತದೆ……

ನಮ್ಮೆಲ್ಲರ ಕ್ರಿಯಾತ್ಮಕ ಚಟುವಟಿಕೆಗಳನ್ನು ನಾಶ ಮಾಡಿ ಪರೋಕ್ಷ ಗುಲಾಮಿ ಸಂಸ್ಕೃತಿಗೆ ದಾಸರನ್ನಾಗಿ ಮಾಡುತ್ತಿದೆ……

ಬಹುತೇಕ ವಿದ್ಯಾವಂತ ಯುವ ಜನಾಂಗ ಸ್ವಿಗ್ಗಿ, ಅಮೆಜಾನ್, ಫ್ಲಿಪ್ ಕಾರ್ಟ್, ಜೊಮಾಟೋ, ಕಾಲ್ ಸೆಂಟರ್ ಮುಂತಾದ ಕಂಪನಿಗಳಲ್ಲಿ ಪೋಸ್ಟ್ ಮ್ಯಾನ್ ಗಳ ರೀತಿಯ ಉದ್ಯೋಗಗಳಲ್ಲಿ ಕೇವಲ ಬದುಕುವ ಏಕೈಕ ಉದ್ದೇಶದಿಂದ ತಮ್ಮ ಅಪೂರ್ವ ಶಕ್ತಿಯನ್ನು ವಿನಿಯೋಗಿಸಿದರೆ ಅವರ ಬದುಕಿನ ಸಾರ್ಥಕತೆ ಮತ್ತು ದೇಶದ ಭವಿಷ್ಯದ ಉತ್ಪಾದನಾ ಸಾಮರ್ಥ್ಯ ಏನಾಗಬಹುದು……

ಆದ್ದರಿಂದ, ಕೇವಲ ಹೊಟ್ಟೆಪಾಡಿನ ಉದ್ಯೋಗ ಮಾತ್ರ ಅಭಿವೃದ್ಧಿಯಲ್ಲ. ಮನುಷ್ಯನ ಆಸೆ ಕನಸುಗಳು, ಕ್ರಿಯಾತ್ಮಕ ಸಾಧನೆಗಳು ಮತ್ತು ನೆಮ್ಮದಿಯ ಮಟ್ಟ ಹೆಚ್ಚಿ ತೃಪ್ತಿದಾಯಕ ಬದುಕು ನಮ್ಮದಾಗುವಂತ ಸಮಾಜ ನಮ್ಮದಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…

5 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

7 hours ago

Affordable Emotional Support Animal Letters for Enhanced Well-being

Cheap Emotional Support Animal Letter: Affordable ESA Documentation Affordable Emotional Support Animal Letters for Enhanced…

15 hours ago

ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಶ್ರೀರಾಮೋತ್ಸವ‌:‌ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ: ಶ್ರೀರಾಮ ನಾಮದಲ್ಲಿ ಮಿಂದೆದ್ದ ಸಹಸ್ರಾರು ಜನ

ಶ್ರೀರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಾರ್ಚ್ 27 ರಿಂದ ಮೂರು ದಿನಗಳ…

20 hours ago

ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ದಾರುಣ ಸಾವು

ಆಟವಾಡುತ್ತಾ ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು…

23 hours ago

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್…!!?: ಪ್ರಸಾದ ತಿಂದ ಬಹುತೇಕ ಜನ ಆಸ್ಪತ್ರೆ ಪಾಲು….!

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್...!!?ಆಗಿದ್ದು, ಅನ್ನಪ್ರಸಾದ ಸೇವಿಸಿದ ಗ್ರಾಮಸ್ಥರಲ್ಲಿ ಬಹುತೇಕ ಜನ ಆಸ್ಪತ್ರೆ ಪಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ…

1 day ago