ಹೊನ್ನೇನಹಳ್ಳಿ, ವಡಗೂರು ಗ್ರಾಪಂ ಪಿಡಿಒಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಕೋಲಾರ: ಅಕ್ರಮವಾಗಿ ಲೂಟಿಯಲ್ಲಿ ತೊಡಗಿರುವ ಹೊನ್ನೇನಹಳ್ಳಿ ಗ್ರಾಪಂ ಪಿಡಿಒ ಹರೀಶ್ ಹಾಗೂ ವಡಗೂರು ಗ್ರಾಪಂ ಪಿಡಿಒ ರಮೇಶ್ ಬಾಬು ವಿರುದ್ದ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೇತೃತ್ವದಲ್ಲಿ ಗುರುವಾರ ಜಿಲ್ಲಾ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿ ಜಿಪಂ ಉಪ ಕಾರ್ಯದರ್ಶಿ ರಮೇಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ ಹೊನ್ನೇನಹಳ್ಳಿ ಮತ್ತು ವಡಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮವಾಗಿ ರಾಜಕಾಲುವೆ ಒತ್ತುವರಿ, ಇ ಖಾತೆಗಳ ಹೆಸರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ, ಭೂಪರಿವರ್ತನೆ, ನರೇಗಾದಲ್ಲಿ ಭ್ರಷ್ಟಾಚಾರ, ಸರ್ಕಾರಿ ಗುಂಡು ತೋಪುಗಳನ್ನು ಬಲಾಢ್ಯರಿಗೆ ಮಾಡಿಕೊಟ್ಟಿದ್ದಾರೆ ದಲಿತರ ಭೂಮಿ ವಂಚನೆ ಮಾಡಿರುವ ಪಿಡಿಒಗಳ ವಿರುದ್ದ ಲೋಕಾಯುಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಹೊನ್ನೇನಹಳ್ಳಿ ಮತ್ತು ವಡಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಇ ಸ್ವತ್ತುಗಳನ್ನು ಪರಿಶೀಲನೆ ಮಾಡಬೇಕು ಇವರುಗಳ ಅಕ್ರಮಗಳ ಬಗ್ಗೆ ದೂರು ನೀಡಿದರು ಯಾವುದೇ ಕ್ರಮ ವಹಿಸಿಲ್ಲ ಕೂಡಲೇ ಇವರ ವಿರುದ್ದ ಕ್ರಮ ಕೈಗೊಂಡು ಇವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಜಮೀನುಗಳ ಬಗ್ಗೆ ಸರ್ವೆ ಮಾಡಿಸಿ ಸರ್ಕಾರಿ ಜಮೀನು ಉಳಿಸಿ ಜಾನುವಾರುಗಳಿಗೆ ಮೀಸಲಿಟ್ಟು ದಲಿತರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕ್ರಮವಹಿಸುವಂತೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಉಪ ಕಾರ್ಯದರ್ಶಿ ರಮೇಶ್ ಮನವಿಯನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಮಿಕ ಘಟಕದ ಅಧ್ಯಕ್ಷ ಜಿ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪಿ‌.ನಾರಾಯಣ್, ರಾಜ್ಯ ಸಂಚಾಲಕ ವಿ.ಮಂಜುನಾಥ್, ಜಿಲ್ಲಾ ಅಧ್ಯಕ್ಷ ವಿ.ಅಮರೇಶ್ ಬಂಗಾರಪೇಟೆ ತಾ ಅಧ್ಯಕ್ಷ ತಿಪ್ಪಣ್ಣ, ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಉಮಾರಾಣಿ ಮುಂತಾದವರು ಇದ್ದರು

Leave a Reply

Your email address will not be published. Required fields are marked *

error: Content is protected !!