ದೊಡ್ಡಬಳ್ಳಾಪುರ ನಗರದ ಹಳೇ ಕೊಂಗಾಡಿಯಪ್ಪ ಮುಖ್ಯ ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ.
ಬಣ್ಣದ ವ್ಯಾಪಾರ ಮಾಡುವ ಚಂದ್ರಶೇಖರ್ ಎನ್ನುವವರು ಪ್ರತಿ ನಿತ್ಯದಂತೆ ಇಂದು ಅಂಗಡಿ ಬಂದು ಹೊರಗೆ ಗಾಡಿ ನಿಲ್ಲಿಸಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಇದನ್ನು ಕಂಡ ಸ್ಥಳೀಯರು ಬೆಂಕಿ ಹೊತ್ತಿಕೊಂಡ ವಾಹನವನ್ನು ಅಂಗಡಿ ಮುಂದಿನಿಂದ ರಸ್ತೆಗೆ ಎಳೆದು ನಿಲ್ಲಿಸಿ ಭಾರೀ ಅವಘಡವನ್ನು ತಪ್ಪಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಂದ್ರಶೇಖರ್ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ಜಪಾನ್ ಮೂಲದ ಎಲೆಕ್ನಿಕ್ ಗಾಡಿ ಖರೀದಿ ಮಾಡಿದ್ದು, ಇತ್ತೀಚೆಗಷ್ಟೆ ನೂತನ ಬ್ಯಾಟರಿ ಅಳವಡಿಸಿದ್ದರು ಎಂದು ತಿಳಿದುಬಂದಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.