ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ, ಶಾಸಕರ ಅನುದಾನದಲ್ಲಿ ನಿರ್ಮಿಸಲಾಗಿರುವ 35 ಲಕ್ಷ ಮೌಲ್ಯದ ಬೃಹತ್ ಹೈಮಾಕ್ಸ್ ಲೈಟ್, ಸಿಸಿ ಕ್ಯಾಮೆರಾ, ಸೋಲಾರ್ ಲೈಟ್, ಶಾಲೆಗೆ ಡೆಸ್ಕ್, ವಾಟರ್ ಫಿಲ್ಟರ್, ವ್ಯಾಯಾಮ ಉಪಕರಣಗಳನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜ್ ಉದ್ಘಾಟಿಸಿದರು.
ಮಧುರನಹೊಸಹಳ್ಳಿ ಗ್ರಾಮದ ಸದಸ್ಯೆ ಶಿಲ್ಪ.ಜಿ ಮುನಿಯಪ್ಪ, ಹಾದ್ರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸತೀಶ್ ಕುಮಾರ್ ಹೆಚ್.ಜಿ, BJP ತಾಲೂಕು ಅಧ್ಯಕ್ಷ ನಾಗೇಶ್, ಗುತ್ತಿಗೆದಾರ ಹೇಮಂತ್ ತಿಪ್ಪಗೊಂಡನಹಳ್ಳಿ, ಗ್ರಾಮದ ನಿವೃತ್ತ ಶಿಕ್ಷಕ ದಿವಂಗತ ಗಂಗಣ್ಣ ರವರ ಪತ್ನಿ ಲಕ್ಷ್ಮಮ್ಮ, ಗ್ರಾಮ ಪಂಚಾಯ್ತಿ ಸದಸ್ಯರು ಸೇರಿ ಗ್ರಾಮದ ಮುಖಂಡರು ಉಪಸ್ಥಿತಿ ಇದ್ದರು.
ಇದೇ ವೇಳೆ ಮಧುರಹೊಸಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಕ್ಕುಪತ್ರ, ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕರಲ್ಲಿ ಮನವಿ ಮಾಡಲಾಯಿತು.