ಹೆಲ್ಮೆಟ್ ಧರಿಸದಿದ್ದರೆ ಪೊಲೀಸರಿಗೂ ಫೈನ್ ಗ್ಯಾರೆಂಟಿ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಕೆ

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ನಿಮ್ಮ ಜೀವ ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಇತ್ತೀಚಿಗೆ ಹೆಲ್ಮೆಟ್‌ ಇಲ್ಲದ ಕಾರಣ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಹಲವು ಸಾವು-ನೋವುಗಳು ಸಂಭವಿಸಿವೆ. ಈ ಬಗ್ಗೆ ಜಾಗೃತರಾಗಿರಬೇಕು. ಒಂದು ವೇಳೆ ಹೆಲ್ಮೆಟ್ ಧರಿಸದೇ ಇದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಸಿದರು.

ದೊಡ್ಡಬಳ್ಳಾಪುರ ನಗರ ಪೊಲೀಸ್ ಇಲಾಖೆ ಮತ್ತು   ಐಸಿಐಸಿಐ ಹಾಗೂ ಸಿನರ್ಜಿ ಇನ್ಸುಟ್ಯೂಟ್ ಆಫ್ ಟ್ರೇಡ್ ಅಂಡ್ ಕಾಮರ್ಸ್ ಲಾಂಬರ್ಡ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗ ಪೊಲೀಸ್ ಠಾಣೆಗಳ ಎಲ್ಲಾ ಸಿಬ್ಬಂದಿಗೆ ಮತ್ತು ಅವರ ಮಕ್ಕಳಿಗೆ ಇಂದು ಹೆಲ್ಮೆಟ್ ವಿತರಣಾ ಕಾರ್ಯಕ್ರಮವನ್ನು ನಗರ ಪೊಲೀಸ್ ಠಾಣೆ ಆವರಣದಲ್ಲಿ ನಡೆಯಿತು.‌ ಈ ವೇಳೆ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ವಿತರಿಸಿ‌ ಮಾತನಾಡಿದ ಅವರು, ಬೈಕ್ ಚಾಲನೆ ಮಾಡುವಾಗ ಪೊಲೀಸರು ಮೊದಲು ಹೆಲ್ಮೆಟ್ ಧರಿಸಿ ಇತರೆ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಪ್ರೇರಣೆ ನೀಡಬೇಕು ಎಂದರು.

ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ನಾವು ಪೊಲೀಸೋರು ನಮಗೆ ಯಾರು ಏನು ಕೇಳೋದಿಲ್ಲ, ಫೈನ್ ಹಾಕೋದಿಲ್ಲ ಎಂದು ತಾತ್ಸಾರ ಮಾಡಬಾರದು. ಅಪಘಾತಕ್ಕೆ ಪೊಲೀಸು, ಗಂಡು, ಹೆಣ್ಣು, ಅಧಿಕಾರಿ ಎಂದು ಗೊತ್ತಿಲ್ಲ ಆದ್ದರಿಂದ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಪ್ರತಿ ತಿಂಗಳು 50-60% ಅಪಘಾತ ಸಂಭವಿಸುತ್ತಿದೆ. ಪ್ರತಿದಿನ ಎರಡು ಅಪಘಾತ ಪ್ರಕರಣಗಳು ದಾಖಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಐಸಿಐಸಿಐ ಹಾಗೂ ಸಿನರ್ಜಿ ಇನ್ಸುಟ್ಯೂಟ್ ಆಫ್ ಟ್ರೇಡ್ ಅಂಡ್ವಕಾಮರ್ಸ್ ಲಾಂಬರ್ಡ್ ತರಬೇತಿದಾರರಾದ ಸುಪ್ರಿಯ ಸುಭಾಷ್ ಅವರು ಹೆಲ್ಮೆಟ್ ಧರಿಸುವ‌ ಕುರಿತು ತರಬೇತಿ ನೀಡಿದರು.

ಈ ವೇಳೆ ಎಎಸ್ಪಿ ನಾಗರಾಜು ಕೆ.ಎಸ್.ಡಿ.ವೈ.ಎಸ್.ಪಿ ರವಿ, ನಗರ ಪೊಲೀಸ್‌ ಠಾಣಾ ಇನ್ಸ್ಪೆಕ್ಟರ್ ದಯಾನಂದ್ ಹಾಗೂ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಸಾದಿಕ್ ಪಾಷ ಸೇರಿದಂತೆ ವಿವಿಧ ಠಾಣೆಗಳ ಇನ್ಸ್ಪೆಕ್ಟರ್,  ಪೋಲೀಸ್ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *