ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಯೊರ್ವಳು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆ ನಂತರ ತಾಯಿ ಮಗು ಆರೋಗ್ಯವಾಗಿದ್ರು. ಇನ್ನೇನು ಆಸ್ಪತ್ರೆಯಿಂದ ಇಬ್ಬರನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಅಷ್ಟರಲ್ಲಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿ ಕೊನೆಗೆ ಚಿಕೀತ್ಸೆ ಫಲಿಸದೆ ತಾಯಿ ಸ್ಮಶಾನ ಸೇರಿದ್ರೆ… ಆಕೆಯ ನವಜಾತ ಗಂಡು ಶಿಶು ಅನಾಥವಾಗಿದೆ. ಈ ಕುರಿತು ಮನ ಕಲಕುವ ವರದಿ ಇಲ್ಲಿದೆ ಓದಿ….
ಸಾವಿನ ಮನೆ ಸೇರಿರುವ ತಾಯಿ, ತಾಯಿ ಆರೈಕೆಯಲ್ಲಿ ಇರಬೇಕಾದ ನವಜಾತ ಗಂಡು ಶಿಶು ಸಂಬಂಧಿಗಳ ಆರೈಕೆಯಲ್ಲಿ ಇರುವ ದೃಶ್ಯ ಕಂಡು ಬಂದಿದ್ದು ಚಿಕ್ಕಬಳ್ಳಾಪುರದಲ್ಲಿ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಚೌಕ್ಕರೆಡ್ಡಿ ಹಳ್ಳಿ ನಿವಾಸಿ ಅನುಶ್ರೀ, ಹೆರಿಗೆಗಾಗಿ ಚಿಕ್ಕಬಳ್ಳಾಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದಳು.. ಮಾರ್ಚ್ 4 ರಂದು ಅನುಶ್ರೀಗೆ ಸಿಜೇರಿಯನ್ ಮೂಲಕ ವೈದ್ಯರಿಂದ ಸಿಜೇರಿಯನ್ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ನಂತರ ಅನುಶ್ರೀ ಆರೋಗ್ಯವಾಗಿದ್ದಳು. ಇನ್ನೇನು ತಾಯಿ ಮಗುವನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಅಷ್ಟರಲ್ಲಿ ಹೆರಿಗೆಯಾಗಿ ಒಂದು ವಾರದ ನಂತರ ಅನುಶ್ರೀ ಆರೋಗ್ಯದಲ್ಲಿ ಏರುಪೇರಾಗಿದೆ.
ಇದರಿಂದ ಚಿಕ್ಕಬಳ್ಳಾಪುರ ಮಕ್ಕಳ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದರೂ ಚಿಕೀತ್ಸೆ ಫಲಕಾರಿಯಾಗದೆ ಅನುಶ್ರೀ ಮೃತಪಟ್ಟಿದ್ದಾಳೆ.
ಇನ್ನೂ ಅನುಶ್ರೀಗೆ ತೀವ್ರ ಜ್ವರ, ಲೋ ಬಿಪಿ, ಹೃದಯ ಸ್ಥಂಬನ ಸೇರಿದಂತೆ ಉಸಿರಾಟ ಸಮಸ್ಯೆ ಆರಂಭವಾಗಿತ್ತು. ಇದ್ರಿಂದ ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ… ಅನುಶ್ರೀ ಮೃತಪಟ್ಟಿದ್ದು, ಅನುಶ್ರೀ ಸಾವಿನಲ್ಲಿ ವೈದ್ಯರ ಕರ್ತವ್ಯಲೋಪ, ನಿರ್ಲಕ್ಷ ಇಲ್ಲ, ಬಾಣಂತಿಗೆ ಲೋ ಬಿಪಿಯಾಗಿ ಹೃದಯ ಸ್ಥಂಬನವಾದ ಕಾರಣ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸಮಜಾಯಿಷಿ ನೀಡಿದ್ದಾರೆ.
ಇನ್ನೂ ಇತ್ತ ತಾಯಿಯ ಎದೆ ಹಾಲು ಕುಡಿದು ಅಮ್ಮನ ಹಾರೈಕೆಯಲ್ಲಿ ಇರಬೇಕಾದ ನವಜಾತ ಗಂಡು ಮಗು… ಅಮ್ಮನ ಅಪ್ಪುಗೆ ಇಲ್ಲದೆ… ತಾಯಿಯ ನಿರೀಕ್ಷೆಯಲ್ಲಿ ಉಸಿರಾಡುವಂತಾಗಿದ್ದು ಮಾತ್ರ ವಿಪರ್ಯಾಸ.