ಬೆಂಗಳೂರು ಗ್ರಾಮಾಂತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮುನ್ನ ಮುನ್ನೆಚ್ಚರಿಕೆ ವಹಿಸದಿದ್ದರೆ ಅಭಿವೃದ್ಧಿ ಕಾರ್ಯವೇ ನಾನಾ ಸಂಕಷ್ಟಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದಕ್ಕೆ ದೊಡ್ಡಬಳ್ಳಾಪರ ತಾಲೂಕು ಮಧುರೆ ಹೋಬಳಿ ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಕಾಡನೂರು ಕೈಮರದ ಜಂಕ್ಷನ್ ಸಾಕ್ಷಿಯಾಗಿದೆ.
ದೊಡ್ಡಬಳ್ಳಾಪುರದಿಂದ ನೆಲಮಂಗಲಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ವಿಸ್ತರಣೆ ಬಳಿಕ ಇದೇ ಹೆದ್ದಾರಿಯಲ್ಲಿರುವ ಕಾಡನೂರು ಕೈಮರ ಜಂಕ್ಷನ್ ಅಪಘಾತವಲಯವಾಗಿ ರೂಪುಗೊಂಡಿದೆ.
ರಸ್ತೆ ವಿಸ್ತರಣೆ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕಡೆಗಣಿಸಿದ್ದರಿಂದ ಈ ಭಾಗದ ಜನರು ಹಾಗೂ ಪ್ರಮುಖವಾಗಿ ವಿದ್ಯಾರ್ಥಿಗಳು ಪ್ರಾಣಭೀತಿ ಎದುರಿಸುವಂತಾಗಿದೆ.
2016ರಲ್ಲಿ ಈ ಜಂಕ್ಷನ್‌ನಲ್ಲಿ ನಿರ್ಮಿಸಲಾಗಿದೆ, ಇದು ಅವೈಜ್ಞಾನಿಕವಾಗಿದ್ದು, ಹೆದ್ದಾರಿಯಿಂದ ದೂರ ಇದೆ. ಇದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ಈ ತಂಗುದಾಣ ಬಳಸುತ್ತಿಲ್ಲ. ಇದೇ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶ್ರೀರಾಮ ಪ್ರೌಢಶಾಲೆ . ಚಂದ್ರಮೋಹನ ವಸತಿ ಶಾಲೆ
ಯುನಿವರ್ಸಲ್ ಪಬ್ಲಿಕ್ ಸ್ಕೂಲ್ ಇದ್ದು, ವಿದ್ಯಾರ್ಥಿಗಳು ಹೆದ್ದಾರಿ ಬದಿಯಲ್ಲೇ ನಿಂತು ಬಸ್‌ಗಾಗಿ, ‘ಕಾಯುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಜೆ 7 ಗಂಟೆ ಬಳಿಕ ತಂಗುದಾಣ ಕುಡುಕರ ಅಡ್ಡೆಯಾಗಿದೆ.
ಹೆದ್ದಾರಿ ಅಭಿವೃದ್ಧಿ ಬಳಿಕ ಬಸ್ ನಿಲ್ದಾಣ ನಿರ್ಮಿಸುವುದಾಗಿ ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ರಸ್ತೆ ಕಾಮಗಾರಿ ಮುಗಿದ ಬಳಿಕ ಇತ್ತ ಯಾರೊಬ್ಬರ ಸುಳಿವೇ ಇಲ್ಲ.
ದೊಡ್ಡಬಳ್ಳಾಪರ-ನೆಲಮಂಗಲ ಸಂಪರ್ಕ ರಸ್ತೆ ಜತೆಗೆ ಮಾರಸಂದ್ರ ಜಗದಹಳ್ಳಿ ಮದಗೊಂಡನಹಳ್ಳಿ ಕಾಡನೂರು ಸೇರಿ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಹಳ್ಳಿಗಳಿಂದ ಕೈವಾರ ಜಂಕ್ಷನ್ ಬಂದು ಹೋಗುತ್ತಾರೆ. ಹೀಗೆ ಬರುವ ಜನ ಹೆದ್ದಾರಿ ದಾಟಲು ಪರದಾಡುವಂತಾಗಿದೆ.
ವೇಗವಾಗಿ ಬರುವ ಬಸ್, ಲಾರಿ, ಕಾರುಗಳಂತಹ ವಾಹನಗಳ ನಡುವೆ ರಸ್ತೆ ದಾಟುವುದು ಪ್ರಾಣವನ್ನು ಪಣಕ್ಕಿಟ್ಟಂತಾಗುತ್ತಿದೆ ಬೇಗಮತಿ ಹಬ್ಬಗಳು ಸಹ ಇಲ್ಲದಿರುವುದು. ಅದರಲ್ಲೂ ಸೈಕಲ್‌ಗಳಲ್ಲಿ ಬರುವ ನೂರಾರು ವಿದ್ಯಾರ್ಥಿಗಳು ರಸ್ತೆ ದಾಟಲು ಪ್ರತಿನಿತ್ಯ ಸರ್ಕಸ್ ಮಾಡಬೇಕಿದೆ ಈ ಭಾಗದಲ್ಲಿ ಶಾಲಾ ವಲಯ ನಾಮಫಲಕಗಳ ಅಳವಳಿಕೆ ಸೇರಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ರಸ್ತೆ ವಿಸ್ತರಣೆ ಬಳಿಕ ಹೆದ್ದಾರಿಯ ಸಮೀಪದಲ್ಲಿದ್ದ ಬಹುತೇಕ ಅಂಗಡಿಗಳು ಹೆದ್ದಾರಿಯ ಸಮೀಪಕ್ಕೆ ಬಂದಿವೆ, ಅಂಗಡಿಗಳು ತಂಗುದಾಣವನ್ನೇ ಮರೆ ಮಾಡಿ, ಹೆದ್ದಾರಿಗೆ ಅಂಟಿಕೊಂಡಂತೆ ಇರುವ ಅಂಗಡಿ ಮುಂಗಟ್ಟುಗಳಲ್ಲಿ ಟೀ, ಉಪಾಹಾರ, ಇನ್ನಿತರ ವಸ್ತುಗಳನ್ನು ಖರೀದಿಸಲು ವಾಹನ ಸವಾರರು ಹೆದ್ದಾರಿಯಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದು ಮತ್ತಷ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶಾಲೆ ಸಮೀಪವೇ ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ, ಬೀಡಿ, ಸಿಗರೇಟ್, ಗುಟ್ಕಾ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಗ್ರಾಮ ಪಂಚಾಯತಿ ಸದಸ್ಯ ಮುನಿರಾಜ್
ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಯಲ್ಲಿ ಧ್ವನಿಯೆತ್ತಿದ್ದೇನೆ ಯಾರು ಸಹ ಈ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಅಧಿಕಾರಿಗಳ ನಿರ್ಲಕ್ಷ್ಯದಿಂದ
ಹಾಗೂ ದೊಡ್ಡ ತುಮಕೂರು ಪಂಚಾಯಿತಿ ಕಾಡನೂರು ಗ್ರಾಮ ಪಂಚಾಯಿತಿ ಗಡಿ ಆದುದರಿಂದ ಇದರ ಕಡೆಗೆ ಎರಡು ಪಂಚಾಯತಿಗಳು ಗಮನಹರಿಸುತ್ತಿಲ್ಲ . ಹಾಗೂ ಅಬಕಾರಿ ಇಲಾಖೆಯವರು ಮಾದಕ ವಸ್ತುಗಳು ಮಾರದಂತೆ ನಿಗ ವಹಿಸಬೇಕು.
ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ಕೈಮರ ಸರ್ಕಲ್ ಗೆ ಬಂದು ನಗರ ಪ್ರದೇಶಗಳಿಗೆ ಕೆಲಸಕ್ಕೆ ಶಾಲೆಗೆ ಹೋಗುವವರು ಸುಮಾರು ಹೆಚ್ಚು ಜನರ ಸಂಚರಿಸುವ ಮಾರ್ಗವಾಗಿದ್ದು ಬಸ್ ನಿಲ್ದಾಣವು ಮರೆಯಲಿದ್ದು ಕೆಲಸಕ್ಕೆ ಬಾರದಂತಾಗಿದೆ.
ಜೊತೆಗೆ ಶಾಲಾ ಮಕ್ಕಳ ಮೇಲೆ ಈ ಸರ್ಕಲ್ ದುಷ್ಪರಿಣಾಮವನ್ನು ಬೀರುತ್ತಿದೆ . ಈ ಅಂಗಡಿ ಹೋಟೆಲ್ ಗಳಲ್ಲಿ ಬಳಸುವ ಸಣ್ಣ ಪ್ರಮಾಣದ ಪ್ಲಾಸ್ಟಿಕ್ ಗಳು ಟೀ ಗ್ಲಾಸ್ ಗಳನ್ನು ರಸ್ತೆ ಬದಿಗಳಲ್ಲಿ ಹಾಕುವುದು ಹಾಗೂ ಮಾದಕ ವಸ್ತುಗಳ ಸೇವನೆ ಶಾಲೆಯಿಂದ 100 ಮೀಟರ್ ದೂರದಲ್ಲಿ ಇರಬೇಕೆಂಬ ನೀವು ಮೀರಿದೆ ಎಂದರು ಚೇತನ್ ಕುಮಾರ್ ಗ್ರಾಮಸ್ಥ .