ಹೆದ್ದಾರಿ ಮೂಲಕ ಬೇಗ ಮನೆ, ತಲುಪಬೇಕಾದ ಸ್ಥಳ ತಲುಪುತ್ತೇವೆ ಅಂದುಕೊಂಡವರು ಆಸ್ಪತ್ರೆ ಪಾಲಾದರೆ, ಇನ್ನೂ ಕೆಲವರು ದೇವರ ಪಾದ ಸೇರುತ್ತಿದ್ದಾರೆ…. ಕೇವಲ 15 ದಿನಗಳ ಅಂತರದಲ್ಲಿ ಎರಡು ಸಾವು, 15 ಜನರಿಗೆ‌ ಗಾಯ

ಆ ಹೆದ್ದಾರಿ ರಸ್ತೆ ನಿರ್ಮಾಣ ಆಗಿ ಕೇವಲ‌ ಒಂದು ವರ್ಷ ಮಾತ್ರ ಆಗಿದೆ. ಮೊದಲು ರಸ್ತೆ ಉದ್ಘಾಟನೆ ಆಯಿತಲ್ಲಾ ಅಂತ ಸಂತೋಷದಿಂದ ಇದ್ದ ಜನರು ಈಗ ಹಿಡಿ ಶಾಪ ಹಾಕುವಂತೆ ಆಗಿದೆ. ಸುಲಭವಾಗಿ ಮನೆ ಸೇರುತ್ತೇವೆ ಎಂದು‌ ಕೊಂಡವರು ಅಪಘಾತಕ್ಕೆ ತುತ್ತಾಗಿ ಕೈಕಾಲು‌ ಮುರಿದುಕೊಂಡು, ತಲೆ‌ಬುರುಡೆ ಹೊಡೆದುಕೊಂಡು ಆಸ್ಪತ್ರೆ ಪಾಲಾದರೆ, ಇನ್ನೂ ಕೆಲವರು ದೇವರ ಪಾದ ಸೇರುತ್ತಿದ್ದಾರೆ. ಅಷ್ಟಕ್ಕೂ ಆ ಹೆದ್ದಾರಿ ರಸ್ತೆಯಲ್ಲಿ ಏನಾಗುತ್ತಿದೆ, ಎಲ್ಲಿ ಅಂತಿರಾ ಈ ಸ್ಟೋರಿ ಓದಿ………

ಹೌದು ರಾಷ್ಟ್ರೀಯ ಹೆದ್ದಾರಿ 648ರ ದಾಬಸ್ ಪೇಟೆ -ಹೊಸಕೋಟೆ ರಸ್ತೆಯಲ್ಲಿ ಹುಲಿಕುಂಟೆ ಟೋಲ್ ಪ್ರಾರಂಭ ಆಗಿ ಕೇವಲ ಒಂದು ವರ್ಷ ಮಾತ್ರ ಆಗಿದೆ. ಈ ರಸ್ತೆ ಮೂಲಕ ಸಂಚಾರ ಮಾಡುವ ಪ್ರತಿಯೊಂದು ವಾಹನದಿಂದ ಟೋಲ್ ಸಂಗ್ರಹ ಮಾಡುತ್ತಾರೆ. ಆದರೆ, ಸವಾರರಿಗೆ ಮಾತ್ರ ಸರಿಯಾದ ವ್ಯವಸ್ಥೆಗಳ‌ನ್ನು ಮಾಡುತ್ತಿಲ್ಲ. ಗೀತಂ ಯೂನಿವರ್ಸಿಟಿ ಯಿಂದ ಹುಲಿಕುಂಟೆ ಟೋಲ್ ವರೆಗೆ ರಸ್ತೆಯಲ್ಲಿ ಸಾಕಷ್ಟು ಕಡೆ ಉಬ್ಬು ತಗ್ಗುಗಳಿವೆ. ಹಾಗಾಗಿ ವಾಹನಗಳು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಆಗುತ್ತಿವೆ. ವಿಭಜಕಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಳು ಒಣಗುತ್ತಿವೆ. ಇರಬೇಕಾದ ಸ್ಥಳಗಳಲ್ಲಿ ಸೂಚನಾ ಫಲಕಗಳಿಲ್ಲ. ಇನ್ನೂ ಹಲವಾರು ನ್ಯೂನ್ಯತೆಗಳು ಇರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ( ಪ್ರವೀಣ್ ಶೆಟ್ಟಿ ಬಣ) ರವಿ ರಾಜಘಟ್ಟ ಆಕ್ರೋಶವ್ಯಕ್ತಪಡಿಸಿದ್ದಾರೆ.

ಇನ್ನೂ ರಸ್ತೆಯ ಉಬ್ಬು ತಗ್ಗುಗಳು ಕಾಣದೆ ಕಳೆದ ಒಂದು ವಾರದ ಹಂತರದಲ್ಲಿ 15 ಕ್ಕೂ ಹೆಚ್ಚು ಜನರು ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಜೊತೆಗೆ ಇಬ್ಬರು ಪ್ರಾಣವನ್ನೂ ಬಿಟ್ಟಿದ್ದಾರೆ. ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ, ಹೆದ್ದಾರಿಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮೈಸೂರು ರಸ್ತೆ ಸಮಸ್ಯೆ ಆದಾಗ ಇಡೀ ಸರಕಾರವೇ ಅದರ‌ ಬಗ್ಗೆ ಗಮನಹರಿಸಿತ್ತು. ಆದರೆ, ಈಗ ಇಷ್ಟು ಅಪಘಾತಗಳು ಸಂಭವಿಸುತ್ತಿವೆ. ಇಷ್ಟಾದರೂ ಯಾವುದೇ ಸೂಕ್ತ ಕ್ರಮಗಳು‌ ಆಗುತ್ತಿಲ್ಲ.‌ ಸರಿಯಾದ ಸಮಯಕ್ಕೆ ಟೋಲ್‌ನ ಆಂಬ್ಯುಲೆನ್ಸ್ ಸ್ಥಳಕ್ಕೆ ಬರುತ್ತಿಲ್ಲ. ಯಾವಾಗಲೂ ಟೋಲ್ ನ ಬಳಿಯೇ ಇರುತ್ತದೆ. ಹಾಗಾಗಿ ಅಪಘಾತ ಆದಾಗ ಖಾಸಗಿ ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ಬಂದು, ಉಪಚರಿಸುವ ನೆಪದಲ್ಲಿ ಬಡವರ ಜೇಬು ಖಾಲಿ ಮಾಡಿಸುತ್ತಿವೆ. ಹಾಗಾಗಿ ನಗರ ಪ್ರದೇಶದಲ್ಲಿ ಆಂಬ್ಯುಲೆನ್ಸ್ ಇರಬೇಕು ಎಂದು ಕರವೇ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.

ಒಂದು ವೇಳೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದರ ಜೊತೆಗೆ ರಸ್ತೆ ತಡೆದು, ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಹೊಸ ಹೆದ್ದಾರಿ ರಸ್ತೆ ಸಾವಿನ ರಸ್ತೆಯಾಗಿ ಹೆಸರು ಮಾಡುತ್ತಿದೆ. ಇನ್ನಾದರೂ ಟೋಲ್ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಿ ಅಪಘಾತಗಳಿಗೆ ಕಡಿವಾಣ ಹಾಕುತ್ತಾರಾ ಕಾದು ನೋಡಬೇಕಿದೆ……

Ramesh Babu

Journalist

Recent Posts

ಮಹಿಳೆಯರ ಒಳ ಉಡುಪು ಕದ್ದು ಧರಿಸುತ್ತಿದ್ದ ‘ಸೈಕೋ’ ಕಳ್ಳ ಅರೆಸ್ಟ್: ನಿಟ್ಟುಸಿರು ಬಿಟ್ಟ ಜನ

ಮಹಿಳೆಯರ ಒಳ ಉಡುಪುಗಳನ್ನು ಕದ್ದು ಧರಿಸುತ್ತಿದ್ದ ವಿಚಿತ್ರ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತ್ ಎಂಬ ಈ ಆರೋಪಿ, ರಾತ್ರಿ ವೇಳೆ…

20 minutes ago

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

15 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

20 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

20 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

1 day ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

2 days ago