ಹೆದ್ದಾರಿ ಡಾಬಾಗಳ ಬಳಿ ಖದೀಮರಿಂದ ದರೋಡೆ ಸ್ಕೇಚ್: ಸ್ವಲ್ಪ ಯಾಮಾರಿದ್ರೆ ಚಾಕು ತೋರಿಸಿ, ಬೆದರಿಸಿ ಹಣ, ಚಿನ್ನಾಭರಣ, ಮೊಬೈಲ್ ಎಗರಿಸುವ ದರೋಡೆಕೋರರು….ಇರಲಿ ಎಚ್ಚರಿಕೆ….

ಹೆದ್ದಾರಿಗಳಲ್ಲಿ ಹೋಗುವ ವಾಹನ ಸವಾರರು ಮಧ್ಯಾಹ್ನ ಮತ್ತು ರಾತ್ರಿ ವೇಳೆ ಡಾಬಾಗಳ ಬಳಿ ವಾಹನ ನಿಲ್ಲಿಸಿ ಊಟ ಮಾಡಿ ಹೋಗುವುದು ಸಹಜ. ಆದರೆ, ಇದನ್ನೆ ತಮ್ಮ ಬಂಡವಾಳ ಮಾಡಿಕೊಂಡ ಖದೀಮರು ಒಂಟಿ ಜನರನ್ನ ಬೆದರಿಸಿ ಶೋಕಿ ಮಾಡೋದನ್ನ ಕರಗತ ಮಾಡಿಕೊಂಡಿದ್ದು ಇದೀಗ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.

ದಡೋತಿ ದೇಹ ಕೈ ಕಾಲುಗಳೆಲ್ಲ ದೇವರ ಚೆನ್ನಾಗೆ ಕೊಟ್ಟಿದ್ದಾನೆ. ದುಡಿದು ತಿನ್ನೋಕ್ಕೆ ತೋಳಲ್ಲಿ ಶಕ್ತಿ ಸಹ ಇದ್ದರು, ಮೈ ಬಗ್ಗಿಸಿ ಕೆಲಸ ಮಾಡೋದನ್ನ ಬಿಟ್ಟು ಅಡ್ಡದಾರಿಯಲ್ಲಿ ಜನರ ಸುಲಿಗೆ ಮಾಡೋಕ್ಕೆ ಶುರು ಮಾಡಿರುವ ಖದೀಮರು. ಜೊತೆಗೆ ಒಂದಷ್ಟು ಕಡೆ ಸುಲಿಗೆ ಸ್ಕೇಚ್ ಸಹ ಸಕ್ಸಸ್ ಆಗಿದ್ದು, ಇದನ್ನೆ ಉದ್ಯೋಗ ಮಾಡಿಕೊಳ್ಳಲು ಹೋಗಿ ಇದೀಗ ಪೊಲೀಸರ ಮುಂದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಇಂಗು ತಿಂದ್ದ ಮಂಗಗಳಾಂತಾಗಿದ್ದಾರೆ.

ಡಾಬಾ ಬಳಿ ಸ್ಕೇಚ್ ಹಾಕಿ ಸುಲಿಗೆ ಮಾಡುತ್ತಿದ್ದವರು ಅಂದರ್….

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಮುಂದೆ ಕೈ ಕಟ್ಟಿ ಕುಳಿತಿರುವ ಹೆಸರು ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ಹಾದು ಹೋಗಿರುವ ದಾಬಸ್ ಪೇಟೆಯಿಂದ ಹೊಸಕೊಟೆವರೆಗಿನ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಬೀಡು ಬಿಡ್ತಿದ್ದ ಈ ಮೂವರು ಖದೀಮರು ಡಾಬಾಗಳ ಬಳಿ ಸ್ಕೇಚ್ ಹಾಕ್ತಿದ್ರು. ಅಲ್ಲದೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಡಾಬಾಗಳಿಗೆ ಬರುವ ಒಂಟಿ ಜನರನ್ನೆ ಟಾರ್ಗೆಟ್ ಮಾಡಿಕೊಳ್ತಿದ್ದ ಖದೀಮರು ವಾಹನ ಸವಾರರು ಊಟ ಮುಗಿಸಿ ಕಾರು ಹತ್ತುತ್ತಿದ್ದಂತೆ ಬಂದು ಅಟ್ಯಾಕ್ ಮಾಡ್ತಿದ್ರು. ಇದೇ ರೀತಿ ಕಳೆದ ಎರಡು ತಿಂಗಳಿಂದೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನದೇವಿ ಅಗ್ರಹಾರದ ಮೂನ್ ಲೈಟ್ ಡಾಬಾದಲ್ಲಿ ಊಟಕ್ಕೆ ಬಂದಿದ್ದವರನ್ನ ಬೆದರಿಸಿ ಸುಲಿಗೆ ಮಾಡಿದ್ದು, ಮೊಬೈಲ್ ನಗದು ಮತ್ತು ಫೋನ್ ಪೇ ನಲ್ಲಿದ್ದ ಹಣವನ್ನೆಲ್ಲ ಕಿತ್ತುಕೊಂಡು ಎಸ್ಕೇಪ್ ಆಗಿದ್ರು…

ಕಳೆದ ಮೂರು ನಾಲ್ಕು ತಿಂಗಳುಗಳಿಂದ ದೊಡ್ಡಬಳ್ಳಾಪುರ-ದೇವನಹಳ್ಳಿ ಹೆದ್ದಾರಿಯಲ್ಲಿ ಇದೇ ರೀತಿ ಹಲವು ದರೋಡೆ ಪ್ರಕರಣಗಳು ನಡೆದಿದ್ದ ಕಾರಣ ಅಲರ್ಟ್ ಆಗಿದ್ದ ದೊಡ್ಡಬೆಳವಂಗಲ ಪೊಲೀಸರು ಇದೀಗ ಒಂಟಿ ಜನರನ್ನ ಸುಲಿಗೆ ಮಾಡ್ತಿದ್ದ ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್ ಅನ್ನೊ ಮೂವರು ಖದೀಮರನ್ನ ಲಾಕ್ ಮಾಡಿದ್ದಾರೆ.

ಬಂಧಿತರಿಂದ ಒಂಟಿ ಜನರ ಬಳಿ ಸುಲಿಗೆ ಮಾಡಿದ್ದ 2 ದ್ವಿಚಕ್ರ ವಾಹನ,  2 ಐ ಫೋನ್, ಬೆಲೆ ಬಾಳುವ ವಾಚ್, 80 ಸಾವಿರ ನಗದು ಸೇರಿದಂತೆ ಹಲವು ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬಂಧಿತ ಬಾಲಕೃಷ್ಣ ವಿರುದ್ದ ರೌಡಿ ಶೀಟರ್ ತೆರೆದಿದ್ದು, ಬಾಲೃಕಷ್ಣ ಜೊತೆಗೆ ಅನಿಲ್ ಕುಮಾರ್ ಮೇಲೆ ಮಾದನಾಯಕನಹಳ್ಳಿ, ಮಂಡ್ಯ, ಪೀಣ್ಯ ಬಾಗಲಗುಂಟೆ, ಯಲಹಂಕ, ಕೆಂಗೇರಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಗಳಲ್ಲಿ ಹಲವು ಕೇಸ್ ಗಳು ದಾಖಲಾಗಿವೆ.

ಇದೀಗ ದೊಡ್ಡಬೆಳವಂಗಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ  ಮತ್ತು ಸಿಬ್ಬಂದಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಜೈಲಿಗೆ ಹೋಗಿ ಬಂದಿದ್ದರೂ ಒಳ್ಳೆ ಬುದ್ದಿ ಕಲಿಯದೆ ಜೈಲಿನಲ್ಲಿ ಸಿಕ್ಕ ಸ್ನೇಹಿತರ ಜೊತೆಗೂಡಿ ಮತ್ತಷ್ಟು ಅಪರಾದಗಳನ್ನ ಮಾಡುತ್ತಿದ್ದವರು ಇದೀಗ ಮತ್ತೆ ಮುದ್ದೆ ಮುರಿಯಲು ಮುಂದಾಗಿದ್ದಾರೆ.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

16 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

1 day ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

2 days ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

2 days ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

2 days ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

2 days ago