
ದಾಬಸ್ ಪೇಟೆ-ಹೊಸಕೋಟೆ ಹೆದ್ದಾರಿಯಲ್ಲಿ ಪಿಕಾಪ್ ವಾಹನದ ಬ್ಯಾಕ್ ವೀಲ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿರುವ ಘಟನೆ ಇಂದು ಸಂಜೆ ದೊಡ್ಡಬಳ್ಳಾಪುರ ತಾಲೂಕಿನ ಮೇಸ್ಟ್ರು ಮನೆ ಕ್ರಾಸ್ ಬಳಿ ನಡೆದಿದೆ..

ಕಬ್ಬಿಣದ ಶೀಟ್ ಗಳನ್ನು ಹೊತ್ತು ಹೊಸಕೋಟೆಯಿಂದ ತುಮಕೂರುಗೆ ತೆರಳುವಾಗ ಹಿಂಬದಿಯ ಚಕ್ರ ಮುರಿದು ಬಿದ್ದಿದೆ. ಈ ಹಿನ್ನೆಲೆ ವಾಹನ ಪಲ್ಟಿ ಹೊಡಿದಿದೆ. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಿಕಾಪ್ ವಾಹನ ಪಲ್ಟಿಯಾದ ಹಿನ್ನೆಲೆ ಕಬ್ಬಿಣದ ಶೀಟ್ ಗಳು ಹೆದ್ದಾರಿಗೆ ಬಿದ್ದಿದ್ದು, ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು….