ಹೆಚ್ಚಾದ ಸರಗಳ್ಳತನ ಪ್ರಕರಣಗಳು: ತಾಲೂಕಿನ ನಾಕಾಬಂದಿಗಳಲ್ಲಿ ಚುರುಕುಗೊಂಡ ತಪಾಸಣೆ

ತಾಲೂಕಿನಲ್ಲಿ ಇತ್ತೀಚಿಗೆ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದರಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಕಂಟನಕುಂಟೆ, ಗುಂಜೂರು ಟೋಲ್, ಮೆಳೇಕೋಟೆ ಕ್ರಾಸ್, ಕೋಡಿಗೆಹಳ್ಳಿ ಮುಂತಾದ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನ ತಪಾಸಣೆ ನಡೆಸಲಾಗುತ್ತಿದೆ.

ಸರಗಳ್ಳತನ, ದರೋಡೆ, ಕಳ್ಳತನಗಳ ಇತರೆ ಅಪರಾಧ ಕೃತ್ಯಗಳನ್ನು ತಡೆಯಲು ನಗರ ಹಾಗೂ ಗ್ರಾಮಾಂತರ ಪೊಲೀಸರು ಸರಣಿ ಕ್ರಮಗಳನ್ನು ಕೈಗೊಂಡಿದ್ದಾರೆ.

ಹೆಚ್ಚುತ್ತಿರುವ ಅಪರಾಧ ಘಟನೆಗಳನ್ನು ತಡೆಯಲು, ಪೊಲೀಸರು ಬೈಕ್ ಹಾಗೂ ಇತರೆ ವಾಹನಗಳ ಯಾದೃಚ್ಛಿಕ ತಪಾಸಣೆಯನ್ನು ಪ್ರಾರಂಭಿಸಿದ್ದಾರೆ.

ಈ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಕೂಡ ವಾಹನಗಳ ತಪಾಸಣೆ ನಡೆಸಿದ್ದಾರೆ.

ಸಾರ್ವಜನಿಕರೇ ಎಚ್ಚರ… ನಿರ್ಜನ ಪ್ರದೇಶಗಳು, ರಸ್ತೆಗಳು, ಉದ್ಯಾನವನಗಳಲ್ಲಿ ಒಂಟಿಯಾಗಿ ಸಂಚರಿಸುವಾಗ ಅಥವಾ ಇದ್ದಾಗ ಎಚ್ಚರದಿಂದಿರಿ.

ಚಿನ್ನಾಭರಣಗಳನ್ನು ಸಾರ್ವಜನಿಕರಿಗೆ ಪ್ರದರ್ಶನಗೊಳ್ಳುವಂತೆ ಧರಿಸಬೇಡಿ, ದರೋಡೆಕೋರರು ನಿಮ್ಮ ಆಭರಣಗಳಿಗೆ ಆಸೆಪಟ್ಟು ನಿಮ್ಮ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಬಹುದು ಮತ್ತು ನಿಮ್ಮ ಚಿನ್ನಾಭರಣಗಳನ್ನು ಕದ್ದು ಓಡಿಹೋಗಬಹುದು. ಅಂತಹ ಸಮಯದಲ್ಲಿ ನಮ್ಮ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ.

ಬೆಂಗಳೂರು ಜಿಲ್ಲಾ ಪೊಲೀಸರು ಸದಾ ಸಾರ್ವಜನಿಕರ ಸೇವೆಯಲ್ಲಿರುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಪ್ರಕಟಣೆ ಹೊರಡಿಸಿದೆ.

Leave a Reply

Your email address will not be published. Required fields are marked *