ಹೆಂಡತಿ ಮತ್ತು ಪತ್ನಿಯ ಮನೆಯವರ ಕಾಟ ತಡೆಯಲಾರದೆ ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆ: ಸಾವಯುವ ಮೊದಲು 24 ಪುಟಗಳ ಸೂಸೈಡ್ ನೋಟ್ ಬರೆದು, 1 ಗಂಟೆಯ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆ: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿರುವ ಮೆನ್​ಟೂ (#MenToo) ಹ್ಯಾಶ್​ಟ್ಯಾಗ್: ಮಿಟೂ ರೀತಿಯಲ್ಲೇ ಮೆನ್​ಟೂ ಹ್ಯಾಶ್​ಟ್ಯಾಗ್​ ಅಭಿಯಾನ ಶುರು

ಬೆಂಗಳೂರು: ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಸಾಫ್ಟ್​ವೇರ್ ಇಂಜಿನಿಯರ್ ವೈವಾಹಿಕ ಸಮಸ್ಯೆಗಳನ್ನು ಎದುರಿಸಲಾರದೇ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿಯ ಆತ್ಮಹತ್ಯೆಯ ಪ್ರಕರಣಗಳು ದಿನವೂ ನಡೆಯುತ್ತಲೇ‌ ಇರುತ್ತವೆ. ಸದ್ಯ ಈ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ಕಾರಣ ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ ಬರೆದಿರುವ 24 ಪುಟಗಳ ಸೂಸೈಡ್ ನೋಟ್ ಮತ್ತು ಸಾಯುವ ಮೊದಲು ಮಾಡಿರುವ 1 ಗಂಟೆಯ ವಿಡಿಯೋ ರೆಕಾರ್ಡ್​.

ಪತ್ನಿ ಮತ್ತು ಹೆಂಡತಿಯ ಮನೆಯವರ ಕಾಟ ತಡೆಯಲಾರದೆ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಮೆನ್​ಟೂ (#MenToo) ಹ್ಯಾಶ್​ಟ್ಯಾಗ್ ಟ್ರೆಂಡಿಂಗ್​ನಲ್ಲಿದೆ.

ಲ್ಯಾಪ್​ಟ್ಯಾಪ್​ನಲ್ಲಿ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಸಿ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ನ್ಯಾಯಾಧೀಶರಿಗೆ, ಪೊಲೀಸರಿಗೆ, ತಮ್ಮ ಕಂಪನಿಯ ಬಾಸ್​ಗೆ ಕಳುಹಿಸಿದ್ದಾರೆ. ನಂತರ ಮೊದಲೇ ಪ್ಲಾನ್ ಮಾಡಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅತುಲ್ ಸುಭಾಷ್ ಸಾಯುವ ಮುನ್ನ ಕಂಪ್ಯೂಟರ್, ಐಡಿಗಳನ್ನೆಲ್ಲ ಕಂಪನಿಗೆ ವಾಪಸ್ ಮಾಡಿದ್ದರು. ಬಾಕಿ ಪೇಮೆಂಟ್​ಗಳನ್ನೆಲ್ಲ ಮಾಡಿದ್ದರು. ಪೊಲೀಸರಿಗೆ ಸಾಕ್ಷಿ ಹುಡುಕಲು ಕಷ್ಟವಾಗಬಾರದೆಂದು ಮೊಬೈಲ್​ ಅನ್ ಲಾಕ್ ಮಾಡಿ ಇಟ್ಟಿದ್ದರು. ಕಾರು, ಬೈಕ್​ನ ಕೀಗಳನ್ನು ಫ್ರಿಡ್ಜ್​ ಮೇಲಿಟ್ಟಿದ್ದರು. ಸೂಸೈಡ್ ನೋಟ್ ಅನ್ನು ಕೆಲವರಿಗೆ ಇಮೇಲ್ ಮೂಲಕ ಕಳುಹಿಸಿದ್ದರು.

Oplus_131072

ಅತುಲ್ ಸಾವಿಗೆ ತಮ್ಮ ಹೆಂಡತಿ ಆಕ್ಸೆಂಚರ್​​ನಲ್ಲಿ ಉದ್ಯೋಗಿಯಾಗಿರುವ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಮನೆಯವರೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಅತುಲ್ ಪತ್ನಿ ಉತ್ತರ ಪ್ರದೇಶದಲ್ಲಿ ಅತುಲ್ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅವರು ವೀಡಿಯೊದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ತಾವು ರೆಕಾರ್ಡ್​ ಮಾಡಿದ ವಿಡಿಯೋದಲ್ಲಿ ಮತ್ತು ಸೂಸೈಡ್ ನೋಟ್​ನಲ್ಲಿ ಅವರು “ಪ್ರಸ್ತುತ ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಿಟೂ ರೀತಿಯಲ್ಲೇ ಮೆನ್​ಟೂ ಎಂಬ ಹ್ಯಾಶ್​ಟ್ಯಾಗ್​ ಅಭಿಯಾನ ಶುರುವಾಗಿದೆ.

ಅತುಲ್ ಸಾವಿಗೆ ಕಾರಣರಾದ ನಿಖಿತಾ ಅವರನ್ನು ಕೂಡಲೇ ಬಂಧಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಂಬಂಧಿಸಿದ ಪುರುಷರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ, ಬಂಧಿಸಲಾಗುತ್ತದೆ. ಅದೇ ರೀತಿ ಮಹಿಳೆಯನ್ನೂ ವಿಚಾರಗಣೆಗೆ ಒಳಪಡಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಕಾನೂನಿನಲ್ಲಿ ಪುರುಷರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೂಡ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *