ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿ ಸಾವು

ರಾಜಸ್ಥಾನದ ದೌಸಾ ಜಿಲ್ಲೆಯ ಬಂಡಿಕುಯಿ ಎಂಬಲ್ಲಿನ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಬೆಳಿಗ್ಗೆ 7.30ರ ಸಮಯದಲ್ಲಿ ನಡೆದಿದೆ.

ಯತೇಂದ್ರ (16), ಹೃದಯಯಾಘಾತದಿಂದ ಸಾವನ್ನಪ್ಪಿದ ಯುವಕ. ತರಗತಿಗೆ ಪ್ರವೇಶಿಸುವ ಮುನ್ನವೇ ಕಾರಿಡಾರ್‌ನಲ್ಲಿ ಕುಸಿದು ಬಿದ್ದಿದ್ದಾನೆ.

ಶಾಲೆಯ ಆಡಳಿತ ಮಂಡಳಿಯವರು ತಕ್ಷಣ ಯತೇಂದ್ರನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸರ್ಕಲ್ ಇನ್ಸ್‌ಪೆಕ್ಟರ್ ಪ್ರೇಮಚಂದ್ ಮಾತನಾಡಿ, ಪಂಡಿತಪುರ ರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಭೂಪೇಂದ್ರ ಉಪಾಧ್ಯ ಅವರ ಪುತ್ರ ಯತೇಂದ್ರ ಶನಿವಾರ ಬೆಳಗ್ಗೆ ಹಠಾತ್ತನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಶಾಲಾ ಸಿಬ್ಬಂದಿ ಆತನನ್ನು ಬಂಡಿಕುಯಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, 10 ನಿಮಿಷಗಳ ಚಿಕಿತ್ಸೆ ನಂತರ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ವೈದ್ಯರ ಪ್ರಕಾರ ಯತೇಂದ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಯತೇಂದ್ರ ಅವರ ಹೃದಯದಲ್ಲಿ ಬಾಲ್ಯದಿಂದಲೂ ರಂಧ್ರವಿತ್ತು, ಅದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಮೃತರ ತಂದೆ ಭೂಪೇಂದ್ರ ಉಪಾಧ್ಯಾಯ ಮಾತನಾಡಿ, ‘ಯತೇಂದ್ರ ಅವರಿಗೆ ಶುಕ್ರವಾರವಷ್ಟೇ 16 ವರ್ಷ ತುಂಬಿತು, ಶಾಲಾ ಸಹಪಾಠಿಗಳಿಗೆ ಸಿಹಿ ವಿತರಿಸಿ, ಮನೆಯಲ್ಲಿ ಕೇಕ್ ಕಟ್ ಮಾಡಿ, ಕುಟುಂಬ ಸದಸ್ಯರೊಂದಿಗೆ ತೆಗೆಸಿಕೊಂಡಿದ್ದ ಛಾಯಾಚಿತ್ರಗಳನ್ನೂ ಪಡೆದುಕೊಂಡರು. ಆದರೆ, ನಿನ್ನೆಯ ಸಂತೋಷ ಇಂದು ದುಃಖಕ್ಕೆ ತಿರುಗಿದೆ ಎಂದು ಕಣ್ಣೀರಿಟ್ಟರು.

Leave a Reply

Your email address will not be published. Required fields are marked *