
ಜಮೀನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತದಿಂದ ರೈತ ಸಾವನ್ನಪ್ಪಿದ ಘಟನೆ
ಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಣ್ಣಗೌಡ(55) ಮೃತ ರೈತ.ತಮ್ಮ ಜಮೀನಿನಲ್ಲಿ ಹಿಪ್ಪುನೇರಳೆ ಕಟ್ಟಿಗೆ ಉಳುಮೆ ಮಾಡುತ್ತಿದ್ದರು .ರೇಷ್ಮೆ ಬೆಳೆ ಬೆಳೆದುಕೊಂಡು ಜೀವನ ನಡೆಸುತ್ತಿದ್ದರು.
ಉಳುಮೆ ಮಾಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕುಟುಂಬಕ್ಕೆ ಆಸರೆಯಾಗಿದ್ದ ರೈತನ ಸಾವಿನಿಂದ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಅನಾಥರಾಗಿದ್ದಾರೆ.
ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…