ಹೊಸಕೋಟೆ ಟೌನ್ ಕುವೆಂಪು ನಗರದಲ್ಲಿ ನಿನ್ನೆ(ಡಿ.24) ರಾತ್ರಿ 2 ಗಂಟೆ ಸಮಯದಲ್ಲಿ ಕಿಟಕಿಯ ಸರಳನ್ನು ಮುರಿದು ಮನೆಯೊಂದರ ಒಳಗಡೆ ಹೋಗುವ ಪ್ರಯತ್ನ ಮಾಡಿರುತ್ತಾರೆ.
ಉತ್ತರ ಭಾರತದ ನಾಲ್ಕೈದು ಮಂದಿ ಸಂಶಯಾಸ್ಪದವಾಗಿ (ಚಡ್ಡಿ ಗ್ಯಾಂಗ್) ಕಿಟಕಿಯ ಸರಳನ್ನು ಮುರಿದು ಮನೆಯ ಒಳಗಡೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾರ್ವಜನಿಕರು ಮನೆಯನ್ನು ಬೀಗ ಹಾಕಿಕೊಂಡು ಹೊರ ಹೋಗುವಾಗ ನಗದು ಹಾಗೂ ಯಾವುದೇ ಬೆಲೆ ಬಾಳುವ ವಸ್ತುಗಳು ಮನೆಯಲ್ಲಿ ಇಡದೆ ಸುರಕ್ಷಿತವಾಗಿ ನೋಡಿಕೊಳ್ಳತಕ್ಕದ್ದು. ರಾತ್ರಿ ವೇಳೆಯಲ್ಲಿ ಯಾರೇ ಅಪರಿಚಿತರು ಬಾಗಿಲನ್ನು ತಟ್ಟಿದರೆ ಬಾಗಿಲನ್ನು ತೆಗೆಯ ಬಾರದು.
ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಂಬರ್ – 9480802432, ಹಾಗೂ ಹೊಸಕೋಟೆ ಪೊಲೀಸ್ ಠಾಣೆ ನಂಬರ್ 080- 27931570,ಅಥವಾ 112 ನಂಬರ್ ಗೆ ಕೂಡಲೇ ಕರೆ ಮಾಡಬೇಕು ಎಂದು ಆರಕ್ಷಕ ನಿರೀಕ್ಷರು ಹೊಸಕೋಟೆ ಪೋಲಿಸ್ ಠಾಣೆ ಇವರು ಮನವಿ ಮಾಡಿದ್ದಾರೆ.