ಹುಷಾರ್…..ಮನೆಗೆ ಬೀಗ ಹಾಕಿ ಎಲ್ಲಾದರು ಹೋದರೆ ಸಾಕು ಶುರುವಾಗತ್ತೆ ಕಳ್ಳರ ಕೈಚಳಕ: ಬೀಗ ಮಿರಿದು ಹಣ, ಒಡವೆ ಎಗರಿಸಿ ಪರಾರಿಯಾಗ್ತಾರೆ ಖದೀಮರು

ಗೌರಿಬಿದನೂರು ನಗರದಲ್ಲಿ ಕಳ್ಳರ ಕಾಟ ಮಿತಿಮೀರಿದೆ. ಮನೆಯಲ್ಲಿ ಯಾರು ಇಲ್ಲದೆ ಇರುವ ವೇಳೆ ಮನೆಯ ಬೀಗ ಹೊಡೆದು ಮನೆಯಲ್ಲಿದ್ದ ಚಿನ್ನಭರಣ ದೋಚಿ ಎಸ್ಕೇಪ್ ಆದ ಘಟನೆ ಗೌರಿಬಿದನೂರು ನಗರ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕರೆ ಕಲ್ಲಹಳ್ಳಿಯ ಕುವೆಂಪು ರಸ್ತೆಯಲ್ಲಿರುವ ಅನಂತ್ ಎಂಬುವವರ ಮನೆಯ ಬೀಗ ಒಡೆದು ಕಳ್ಳರು ಕೈಚಳಕ ತೋರಿಸಿರುವ ಘಟನೆ ಈಗ ನಗರ ಜನತೆಯ ನಿದ್ದೆ ಕೆಡೆಸಿದೆ.

ಇನ್ನೂ ಈ ಘಟನೆ ಗೌರಿಬಿದನೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಕಳ್ಳರ ಓಡಾಟ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಕಳ್ಳತನದ ಬಗ್ಗೆ ಮಾತನಾಡಿದ ಅನಂತ್ ಕಳೆದ ಗುರುವಾರ ಸಂಜೆ 6:00 ಗಂಟೆಗೆ ಮನೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದೆ. ಬೆಳಗಿನ ಜಾವ 4:00 ಗಂಟೆಗೆ ಬಂದು ಬೀಗ ತೆಗೆಯಲು ಹೋಗಿದಾಗ ಬೀಗ ಇರಲಿಲ್ಲ. ಕಿಟಕಿಯಲ್ಲಿ ನೋಡಿದಾಗ ಮನೆಯ ಒಳಗಡೆ ಇದ್ದ ಬೀರು ತೆರೆದಿತ್ತು. ಬಾಕ್ಸ್ ನಲ್ಲಿ ಇದ್ದ ಸುಮಾರು 10 ಗ್ರಾಂ ಅಷ್ಟು ಒಡವೆ ಕಳ್ಳತನ ವಾಗಿರುವುದು ಬೆಳಕಿಗೆ ಬಂದಿದೆ ಎಂದರು.

ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿ ಬೇರೆ ಮನೆಗಳ ಕಡೆ ಓಡಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ ಈ ಘಟನೆಯಿಂದ ಸುತ್ತಮುತ್ತಲಿನ ಮನೆಯವರು ಭಯಭೀತರಾಗಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *