ಹೈದರಾಬಾದ್‌ನ ಕಿರಾನಾ ಅಂಗಡಿಯೊಂದರಲ್ಲಿ ಭಾರೀ ಪ್ರಮಾಣದ ಗಾಂಜಾ ಚಾಕಲೇಟ್‌ಗಳು ಪತ್ತೆಯಾಗಿವೆ.
ಸೈಬರಾಬಾದ್ ಪೊಲೀಸರು ಜಗದ್ಗಿರಿಗುಟ್ಟದಲ್ಲಿರುವ ಜೈ ಶ್ರೀ ಟ್ರೇಡರ್ಸ್ ಕಿರಾನಾ ಮಳಿಗೆಯಲ್ಲಿ ಒಟ್ಟು ₹2,66,000 ಮೌಲ್ಯದ 160 ಪ್ಯಾಕೆಟ್ (26 ಕೆಜಿ) ಗಾಂಜಾ ಚಾಕೊಲೇಟ್ ಮತ್ತು 4 ಕೆಜಿ ಗಾಂಜಾ ಪುಡಿಯನ್ನು ಪತ್ತೆ ಮಾಡಿ, ವಶಪಡಿಸಿಕೊಂಡಿದ್ದಾರೆ.
ಪ್ರತಿ ಚಾಕೊಲೇಟ್‌ನ ಬೆಲೆ 40 ರೂ. ನಂತೆ ಮಾರಾಟ ಮಾಡಲಾಗುತ್ತಿತ್ತು. ಕೋಲ್ಕತ್ತಾ ಮೂಲದ ಅಂಗಡಿ ಮಾಲೀಕ ಮನೋಜ್ ಕುಮಾರ್ ಅಗರ್ವಾಲ್ ನನ್ನು ಮಾದಾಪುರ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾದ ಗಾಂಜಾ ಪೂರೈಕೆದಾರ ಮೋಹನ್ ಪರಾರಿಯಾಗಿದ್ದಾನೆ.