ಹುಲ್ಲಿನ ಬಣವೆಗೆ ಬೆಂಕಿ: 100ಕ್ಕೂ ಹೆಚ್ಚು ಹುಲ್ಲಿನ ಹೊರೆ ಸುಟ್ಟು ಭಸ್ಮ

ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಹೊತ್ತಿ ಉರಿದ ಘಟನೆ ದೊಡ್ಡಬಳ್ಳಾಪುರದ‌ ಮಧುರನಹೊಸಹಳ್ಳಿ ಕಾಲೋನಿಯಲ್ಲಿ ನಡೆದಿದೆ..

ಮುನಿರಾಜ್ ಎಂಬುವವರಿಗೆ ಸೇರಿದ 100ಕ್ಕೂ ಹೆಚ್ಚು ಹುಲ್ಲಿನ ಹೊರೆ ಸುಟ್ಟು ಭಸ್ಮವಾಗಿದೆ…

ಬೆಂಕಿ ನಂದಿಸಲು ಎಷ್ಟೇ ಹರಸಾಹಸಪಟ್ಟರು, ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಹೋಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಬರುವುದು ತಡವಾದ ಹಿನ್ನೆಲೆ ಹುಲ್ಲಿನ ಬಣವೆ ಸಂಪೂರ್ಣ ಉರಿದು ಭಸ್ಮವಾಗಿದೆ. ತಡವಾಗಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಕಳೆದ ಬಾರಿ ಇದೇ ರೈತನ ಮನೆಯಲ್ಲಿದ್ದ 8 ಮೆಕೆಗಳು ಕಳ್ಳತನವಾಗಿತ್ತು.ಈಗ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸಂಪುರ್ಣ ಭಸ್ಮವಾಗಿದ್ದು, ದಿಕ್ಕುದೋಚದ ಸ್ಥಿತಿಯಲ್ಲಿ ರೈತ ಮುನಿರಾಜು ಇದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಒಂದೇ ಒಂದು ಅಗ್ನಿಶಾಮಕ ವಾಹನ ಇರುವುದರಿಂದ ತಡವಾಯಿತು ಎಂದ ಅಗ್ನಶಾಮಕ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿಗೆ ಹೆಚ್ಚಿನ ಅಗ್ನಿಶಾಮಕ ವಾಹನಗಳನ್ನು ಒದಗಿಸುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!