ಹುಲಿ ಗಣತಿ2022: ದೇಶದಲ್ಲಿರುವ ಹುಲಿಗಳ ಸಂಖ್ಯೆ 3,167: ರಾಜ್ಯಕ್ಕೆ ಎರಡನೇ ಸ್ಥಾನ: ಮೊದಲ ಸ್ಥಾನ ಪಡೆದ ಮಧ್ಯಪ್ರದೇಶ: ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಹುಲಿಗಳಿವೆ..? ಮಾಹಿತಿ ಇಲ್ಲಿದೆ ನೋಡಿ

ಕೇಂದ್ರ ಸರ್ಕಾರ ಹುಲಿ ಗಣತಿ ಅಂಕಿ – ಅಂಶ ಬಿಡುಗಡೆ ಮಾಡಿದ್ದು, ದೇಶ ವ್ಯಾಪಿ 3,167 ಹುಲಿಗಳಿವೆ. ಹುಲಿ ಗಣತಿ ವರದಿ ಪ್ರಕಾರ ಮಧ್ಯಪ್ರದೇಶವು 785 ಹುಲಿಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡರೆ, 563 ಹುಲಿಗಳನ್ನು ಹೊಂದಿರುವ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡದಲ್ಲಿ 560 ಮತ್ತು ಮಹಾರಾಷ್ಟ್ರದಲ್ಲಿ 444 ಹುಲಿಗಳಿವೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ 149 ಹುಲಿಗಳೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ಬಂಡೀಪುರ 140 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ವಿಶ್ವದ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿ ಕಂಡುಬರುತ್ತವೆ. 2018ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಈ ಬಾರಿ 10 ಹುಲಿಗಳು ಕಡಿಮೆಯಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ ಗಣತಿ ಪ್ರಕಾರ ಬಂಡೀಪುರ ಅರಣ್ಯದಲ್ಲಿ 127 ವ್ಯಾಘ್ರಗಳಿದ್ದವು. ಅದೀಗ 140ಕ್ಕೆ ಏರಿದೆ.

Leave a Reply

Your email address will not be published. Required fields are marked *