ಯುವತಿಯನ್ನು ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಯುವಕ ಬೈಕ್ ರೈಡ್ ಮಾಡಿರುವುದು ಈಗ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯ ಯಲಹಂಕ ಫ್ಲೈ ಓವರ್‌ನಲ್ಲಿ ಯುವತಿ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಸಂಗಾತಿಯನ್ನು ಅಪ್ಪಿಕೊಂಡು ಜಾಲಿ ರೈಡ್ ಮಾಡಿರುವ ಘಟನೆ ಮೇ 17ರ ರಾತ್ರಿ ನಡೆದಿದೆ.
ಜೋಡಿಯ ಜಾಲಿ ರೈಡ್‌ನ ದೃಶ್ಯ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಿಡಿದ್ದಾರೆ.
ಯುವ ಜೋಡಿ ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ.