ಹೀಲ್ ಗೂ – ಹೀಲಿನ್ ಗೂ ವ್ಯತ್ಯಾಸ ಗೊತ್ತಾಗದೆ ನನ್ನ ರೋಗಿಗಳು ಪರದಾಟ: ನನ್ನ ರೋಗಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಆ ಪೋಸ್ಟ್ ಹಾಕಿದ್ದೆ – ಡಾ. ಅರ್ಜುನ್ ಎಂ ಬಿ ಸ್ಪಷ್ಟನೆ

ದೊಡ್ಡಬಳ್ಳಾಪುರ : ನನ್ನ ಒಡೆತನದಲ್ಲಿರುವ ಹೀಲ್ ಸ್ಪೆಷಾಲಿಟಿ ಕ್ಲಿನಿಕ್ ಸುಮಾರು 4 ವರ್ಷದಿಂದ ದೊಡ್ಡಬಳ್ಳಾಪುರದಲ್ಲಿ ಸೇವೆ ಸಲ್ಲಿಸುತ್ತಿದೆ. ನನ್ನ ಹೀಲ್ ಆಸ್ಪತ್ರೆಗೂ ಹಾಗೂ ಹೀಲಿನ್ ಹಾಸ್ಪಿಟಲ್ ಗೂ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿ ಇರುವುದರಿಂದ ನನ್ನ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ನಾನು ನನ್ನ ವಾಟ್ಸಾಪ್ ಗ್ರೂಪಿನಲ್ಲಿ ಒಂದು ಪೋಸ್ಟನ್ನು ಹಾಕಿದ್ದೇನೆ ಅಷ್ಟೇ. ಇದ್ದರಿಂದ ನನ್ನ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಗಳ ಆಗಬಾರದು ಎಂಬ ಉದ್ದೇಶದಿಂದ ಹಾಗೂ ನನ್ನ ಹಾಸ್ಪಿಟಲ್ ಹಾಗೂ ನನ್ನ ಹೆಸರು ದುರ್ಬಳಕೆ ಆಗಬಾರದೆಂಬ ಕಾರಣದಿಂದ ನಾನು ಆ ರೀತಿ ಪೋಸ್ಟ್ ಹಾಕಿದ್ದೇನೆ ಎಂದು ಹೀಲ್ ಸ್ಪೆಷಾಲಿಟಿ ಕ್ಲಿನಿಕ್ ನ ವೈದ್ಯರಾದ ಡಾಕ್ಟರ್ ಅರ್ಜುನ್ ಅವರು ಹೇಳಿದರು.

ದೊಡ್ಡಬಳ್ಳಾಪುರದ ಮಗನಾಗಿ ದೊಡ್ಡಬಳ್ಳಾಪುರದ ಜನತೆಗೆ ವೈದ್ಯಕೀಯ ಸೇವೆ ಸಲ್ಲಿಸಲು ಬಂದಿದ್ದೇನೆ. ನಾನು ಹುಟ್ಟಿ ಬೆಳೆದು ಓದಿದ್ದೆಲ್ಲ ಇದೇ ದೊಡ್ಡಬಳ್ಳಾಪುರದಲ್ಲಿ, ನನಗೆ ಬೇರೆ ದೇಶಗಳಿಂದ ಸೇವೆ ಸಲ್ಲಿಸಲು ಆಹ್ವಾನಗಳು ಬಂದಿದ್ದರು ಸಹ ನನ್ನ ಹುಟ್ಟೂರು ದೊಡ್ಡಬಳ್ಳಾಪುರದ ಜನತೆಗೆ ನನ್ನ ಸೇವೆ ಇರಲಿ ಎಂದು ಸುಮಾರು ನಾಲ್ಕು ವರ್ಷಗಳಿಂದ ಹೀಲ್ ಸ್ಪೆಷಾಲಿಟಿ ಕ್ಲಿನಿಕ್ ಎಂಬ ಆಸ್ಪತ್ರೆಯನ್ನು ತೆರೆದು ಜನರಿಗೆ ಕಡಿಮೆ ಬೆಲೆಯಲ್ಲಿ ನಾನು ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ. ಆದರೆ ಇತ್ತೀಚೆಗೆ ನನಗೆ ನನ್ನ ಪೇಷಂಟ್ ಅವರ ಮೊಮ್ಮಗ ಕಡೆಯಿಂದ ಒಂದು ಫೋನ್ ಕಾಲ್ ಬಂತು, ಆತ ಹೇಳಿದ ನನ್ನ ಅಜ್ಜಿಗೆ ಎದೆ ನೋವು ಕಾಣಿಸಿಕೊಂಡಿದೆ ಆದರೆ ನಾನು ಈಗ ಎಲ್ಲಿಗೆ ಬರಬೇಕೆಂಬ ಗೊಂದಲದಲ್ಲಿ ಇದ್ದೀನಿ ಇತ್ತೀಚೆಗೆ ನೀವು ಹೊಸ ಹಾಸ್ಪಿಟಲ್ ಪ್ರಾರಂಭಿಸಿದ್ದೀರಾ ಎಂಬ ವಿಷಯ ತಿಳಿಯಿತು. ನಮಗೆ ಕಂಗ್ರಾಟ್ಸ್ ಹೇಳುತ್ತಾ ದಯಮಾಡಿ ಈಗ ನಾನು ಎಲ್ಲಿಗೆ ಬರಬೇಕು ಎಂದು ಗೊತ್ತಾಗುತ್ತಿಲ್ಲ ದಯವಿಟ್ಟು ನನಗೆ ತಿಳಿಸಿ ಅಂದಾಗ ಆ ವಿಷಯವನ್ನು ಕೇಳಿದ ನನಗೆ ಆಶ್ಚರ್ಯವಾಯಿತು. ತಕ್ಷಣವೇ ಆತನಿಗೆ ನಿಮ್ಮ ಅಜ್ಜಿಯನ್ನು ಮೊದಲು ನಮ್ಮ ಆಸ್ಪತ್ರೆಗೆ ಕರೆತನ್ನಿ ಎಂದು ಹೇಳಿದೆ. ತಕ್ಷಣ ಅವರು ಬಂದರು ಆಗ ನಾನು ಅವರಿಗೆ ಇಸಿಜಿ ಮಾಡಿಸಿ ಅವರಿಗೆ ಒಂದು ವೈದ್ಯಕೀಯ ಚಿಕಿತ್ಸೆಯನ್ನು ಕೊಟ್ಟ ನಂತರ ಅವರು ಹೇಳಿದ ಹಾಸ್ಪಿಟಲ್ ಮುಂದೆ ಹೋಗಿ ನಿಂತೆ. ಅಲ್ಲಿ ಯಾವುದೇ ನಾಮಫಲಕವಾಗಲಿ, ಡಾಕ್ಟರ್ ಹೆಸರಾಗಲಿ ಇರಲಿಲ್ಲ ಆಗ ನಾನು ಯೋಚನೆ ಮಾಡಿ ಈ ಹಿಂದೆಯೂ ಸಹ ನನ್ನ ಹೆಸರು ದುರ್ಬಳಕೆ ಆಗಿತ್ತು ಆದ್ದರಿಂದ ನನ್ನ ವಾಟ್ಸಾಪ್ ಗ್ರೂಪಿನಲ್ಲಿ ನನ್ನ ಪೇಷಂಟ್ಗಳು ಮತ್ತು ನನಗೆ ಗೊತ್ತಿರುವ ಡಾಕ್ಟರ್ ಗಳಿಗೆ ಈ ರೀತಿಯ ಒಂದು ಮೆಸೇಜನ್ನು ಹಾಕಿದ್ದೇನೆ. ಅದರ ಉದ್ದೇಶ ಯಾರಿಗೂ ಅವಮಾನ ಮಾಡಲು ಅಲ್ಲ ಎಂದರು.

ನನ್ನ ರೋಗಿಗಳಿಗೆ ಒಂದು ಕ್ಲಾರಿಫಿಕೇಶನ್ ಕೊಡುವ ಉದ್ದೇಶದಿಂದ ಆ ಒಂದು ಪೋಸ್ಟ್ ಹಾಕಿದೆ, ನಂತರ ಸಂಜೆಗೆ ನನಗೆ ಗೊತ್ತಾಯ್ತು ಅದು ನಮ್ಮ ಡಾಕ್ಟರ್ ವೆಂಕಟೇಶ್ ಪ್ರಸಾದ್ ಅವರ ಹಾಸ್ಪಿಟಲ್ ಎಂದು, ಅಷ್ಟರಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿ ಹೋಗಿತ್ತು, ನಾನು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಕೊನೆಗೆ ನನ್ನ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ಒಂದು ಕಂಪ್ಲೇಂಟ್ ಆಗಿತ್ತು ಅದಕ್ಕಾಗಿ ನಾನು ಸ್ಟೇಷನ್ ಗೆ ಹೋಗಿ ನನ್ನ ಸ್ಟೇಟೆಂಟನ್ನು ಸಹ ಕೊಟ್ಟು ಬಂದೆ. ನಾನು ಯಾವುದೇ ವ್ಯಕ್ತಿಗಾಗಲಿ ಒಂದು ಸಂಸ್ಥೆಗಾಗಲಿ ಅವಮಾನ ಮಾಡುವ ಉದ್ದೇಶ ನನ್ನಲ್ಲಿ ಇಲ್ಲ, ನನಗೂ ಸಹ ತಿಳಿದಿದೆ ಒಂದು ಸಂಸ್ಥೆಯನ್ನು ಕಟ್ಟಬೇಕಾದರೆ ಅದರ ಶ್ರಮ ಎಷ್ಟು ಎಂದು ನಾವು ಎಲ್ಲಾ ವೈದ್ಯರು ಒಂದೇ ಎಲ್ಲರೂ ಒಟ್ಟಾಗಿ ಬೆಳೆಯೋಣ ಎಂದು ಈ ಮೂಲಕ ಹೇಳಲು ಇಷ್ಟಪಡುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!