ಕೋಲಾರ: ಜಿಲ್ಲೆಯ ಹಿರಿಯ ಸಹಕಾರಿ ಧುರೀಣ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಅವರ ಅಭಿಮಾನಿಗಳ ಬಳಗದಿಂದ ಜುಲೈ 7 ರಂದು ಭಾನುವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಾಗರೀಕ ಸನ್ಮಾನಕ್ಕೆ ಶುಕ್ರವಾರ ಭೇಟಿ ನೀಡಿ ಅಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಸಹಕಾರಿ ವ್ಯವಸ್ಥೆಯ ಮೂಲಕ ಪರಿಚಯಿಸಿದ್ದಾರೆ. ಅಣ್ಣಿಹಳ್ಳಿ ಸೊಸೈಟಿಯ ಮೂಲಕ ರಾಜಕೀಯ ಪ್ರಾರಂಭಿಸಿ ತಾಲೂಕು ಬೋರ್ಡ್ ಸದಸ್ಯರಾಗಿ, ಜಿಪಂ ಸದಸ್ಯರಾಗಿ ನಾಲ್ಕು ಬಾರಿ ಕೋಲಾರ ಕ್ಷೇತ್ರದ ಶಾಸಕರಾಗಿ ಜೊತೆಗೆ ಕೃಷಿ ಸಚಿವರಾಗಿ ಜನರ ಸೇವೆಯನ್ನು ಮಾಡಿದ್ದಾರೆ. ಇಂತಹ ಜಿಲ್ಲೆಯ ನೈಜ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಲಾಗುತ್ತಾ ಇದೆ. ಮುಂದಿನ ಯುವ ಪೀಳಿಗೆಗೆ ಇವರನ್ನು ಪರಿಚಯಿಸಬೇಕಾಗಿದೆ ಆ ನಿಟ್ಟಿನಲ್ಲಿ ಈ ಸನ್ಮಾನ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ರಾಜಕೀಯ ಹಿಡಿತವನ್ನು ದಿವಂಗತ ಸಿ.ಬೈರೇಗೌಡರ ನಂತರದ ಸ್ಥಾನವನ್ನು ಕೆ.ಶ್ರೀನಿವಾಸಗೌಡರು ಮುನ್ನಡೆಸಿಕೊಂಡು ಹೋಗಿದ್ದಾರೆ. ಇವರ ನೇತೃತ್ವದಲ್ಲಿ ಜಿಪಂ ತಾಪಂ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಸುಮಾರು 40 ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋಗಿದ್ದಾರೆ. ಮುಂದೆಯೂ ಸಹ ಇವರ ಅವಶ್ಯಕತೆ ಪಕ್ಷಕ್ಕೆ ಹಾಗೂ ಜಿಲ್ಲೆಯ ಜನತೆಗೆ ಬೇಕಾಗಿದೆ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಕೆ.ಶ್ರೀನಿವಾಸಗೌಡರ ಮುಖಂಡತ್ವದಲ್ಲಿ ಇತರೆ ನಾಯಕರು ಮುಖಂಡರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟಿಸಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಎಲ್ಲಾ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಶ್ರೀಕೃಷ್ಣ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದ ರಾಜಕೀಯದ ವ್ಯಾಪಾರಕ್ಕೆ ಶ್ರೀನಿವಾಸಗೌಡರು ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಇವರ ಕ್ಷೇತ್ರದ ತ್ಯಾಗಕ್ಕೆ ಮುಂದಿನ ದಿನಗಳಲ್ಲಿ ಇವರಿಗೆ ಸೂಕ್ತ ಸ್ಥಾನಮಾನಕ್ಕಾಗಿ ಒತ್ತಾಯಿಸಬೇಕಾಗಿದೆ. ಇವರ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಸನ್ಮಾನ ನಡೆಯಲಿದ್ದು, ಜಿಲ್ಲೆಯ ಹಿರಿಯ, ಕಿರಿಯ ಸಹಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಹೊಳಲಿ ಪ್ರಕಾಶ್ ಮಾತನಾಡಿ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ಕೋಲಾರ ಜಿಲ್ಲೆಯ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಲು ಸಾಕಷ್ಟು ಶ್ರಮವನ್ನು ವಹಿಸಿದ್ದಾರೆ. ತಮ್ಮ ಇಫ್ಕೋ ಕ್ರಿಭ್ಕೋ ಸಂಸ್ಥೆಗಳ ವತಿಯಿಂದ ರೈತರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದು, ಜನಪರವಾದ ಕಾಳಜಿಯುಳ್ಳ ನಾಯಕರಾಗಿದ್ದಾರೆ ಇವರು ಸುಮಾರು 2000 ಮಂದಿಗೆ ಜಿಲ್ಲೆಯ ಜನಕ್ಕೆ ಉದ್ಯೋಗ ಕೊಡಿಸಿದ್ದಾರೆ. ಇವರನ್ನು ಕೋಲಾರ ತಾಲೂಕಿನ ಟಿಎಪಿಸಿಎಂಎಸ್, ಪಿಎಲ್ಡಿ ಬ್ಯಾಂಕ್, ಸೊಸೈಟಿಗಳ ಮೂಲಕ ಈ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆಂಬೋಡಿ ನಾರಾಯಣಗೌಡ, ಚಿಕ್ಕಹಸಾಳ ಮಂಜುನಾಥ್, ತೋರದೇವಂಡಹಳ್ಳಿ ನಾಗರಾಜಗೌಡ, ಶ್ರೀರಾಮರೆಡ್ಡಿ, ಸಂತೋಷ್, ಕಠಾರಿಪಾಳ್ಯ ಮಂಜುನಾಥ್ ಮುಂತಾದವರು ಇದ್ದರು.