ಬೆಳಕಿಗಾಗಿ ಹಚ್ಚಿದ್ದ ದೀಪ ಆಕಸ್ಮಿಕವಾಗಿ ಗೋಡೆ ಮೇಲಿಂದ ಹಾಸಿಗೆ ಹಿಡಿದಿದ್ದ ವೃದ್ಧನ ಮೇಲೆ ಬಿದ್ದಿದ್ದು, ಬೆಂಕಿ ಕೋಣೆ ತುಂಬಾ ಆವರಿಸಿ ವೃದ್ಧನನ್ನು ಬಲಿ ಪಡೆದಿದೆ. ಈ ದುರ್ಘಟನೆ ನಗರದ ಕಚೇರಿಪಾಳ್ಯದಲ್ಲಿ ಮಂಗಳವಾರ ರಾತ್ರಿ ಸುಮಾರು 11ಕ್ಕೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾಮಾಂಜಿನಪ್ಪ (70), ಮೃತ ದುರ್ದೈವಿ, ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಬೆಳಕಿಗೆಂದು ದೀಪ ಹಚ್ಚಲಾಗಿತ್ತು, ಈ ವೇಳೆ ದೀಪ ಕೆಳಗೆ ಬಿದ್ದು ಮನೆಯಲ್ಲಿದ್ದ ಬಟ್ಟೆಗಳ ಗಂಟಿಗೆ ಅಂಟಿಕೊಂಡಿದೆ, ವಯಸ್ಸಾಗಿದ್ದ ರಾಮಾಂಜಿನಪ್ಪ ಕುಳಿತರೆ ಎದ್ದೇಳಲಾಗದ ಪರಿಸ್ಥಿತಿಯಲ್ಲಿ ಬೆಂಕಿ ನಂದಿಸಲು ಆಗದೆ ಮಲಗಿದ್ದಲ್ಲೆ ನರಳಾಡಿ ಸಾಗಿವೀಡಾಗಿದ್ದಾರೆ. ಬೆಂಕಿಯ ಕೆನ್ನಾಲಗೆ ನೋಡ ನೋಡುತ್ತಿದ್ದಂತೆ ಮನೆಯನ್ನೆಲ್ಲಾ ಆವರಿಸಿ ಮನೆಯಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ಸ್ಥಳಕ್ಕೆ ನಗರ ಠಾಣಾ ಪೊಲೀಸರು ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.