ಹಾಸನ ಜಿಲ್ಲೆಯ ಕುವರಿಯರು ತುಮಕೂರು ವಿವಿಗೆ ಟಾಪರ್ಸ್

ಹಾಸನ: ಜಿಲ್ಲೆಯಿಂದ ಕಲ್ಪತರು ನಾಡಿನತ್ತ ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಪಯಣ ಬೆಳೆಸಿ ಎರಡು ವರ್ಷದ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡಿದ ಕುವರಿಯರು, ಅತ್ಯುತ್ತಮ ಅಂಕ ಗಳಿಸಿ ಟಾಪರ್ಸ್ ಆಗುವ ಮೂಲಕ ಒಂದೇ ಜಿಲ್ಲೆಯ ನಾಲ್ವರು ಈಗ ವಿಶ್ವವಿದ್ಯಾಲಯ ಸಾಧಕಿಯರಾಗಿರುವುದು ವಿಶೇಷವಾಗಿದೆ.

ಹೌದು ತುಮಕೂರು ನಗರದ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ಪದವಿಯಲ್ಲಿ ವ್ಯಾಸಂಗ ಮಾಡಿದ 4 ವಿದ್ಯಾರ್ಥಿನೀಯರು ವಿಶ್ವವಿದ್ಯಾಲಯದ ಅಗ್ರಶ್ರೇಣಿಯ ಅಂಕ ಪಡೆದು ರ್ಯಾಂಕ್ ಗೆ ಭಾಜನರಾದ ಹಿನ್ನೆಲೆ ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ 18ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ಕುಲಪತಿಗಳು ರ್ಯಾಂಕ್ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ಎಲೆಕ್ಟ್ರಾನಿಕ್ ಮೀಡಿಯಾ ಸ್ನಾತಕೋತ್ತರ ಪದವಿಯಲ್ಲಿ ಹಾಸನ ನಗರದ ಕೃಷ್ಣಾ ಹಾಗೂ ಪುಷ್ಪಲತಾ ದಂಪತಿಯ ಪುತ್ರಿ ರಂಜಿತಾ ಎಚ್.ಕೆ (ಗೋಲ್ಡ್ ಮೆಡಲ್)ಮೊದಲ ಸ್ಥಾನ, ಬೇಲೂರು ಪಟ್ಟಣದ ಉಮೇಶ ಹಾಗೂ ಶೋಭಾ ದಂಪತಿಯ ಪುತ್ರಿ ಸಿಂಧು ತೃತೀಯ ಸ್ಥಾನ, ಚನ್ನರಾಯಪಟ್ಟಣ ತಾಲ್ಲೂಕಿನ ಕಸರನಹಳ್ಳಿ ಗ್ರಾಮದ ಮಂಜುಳಾ ಅವರ ಪುತ್ರಿ ದೀಪಿಕಾ ನಾಲ್ಕನೇ ಸ್ಥಾನ ಪಡೆದರೆ, ಇನ್ನೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಹಾಸನ ತಾಲ್ಲೂಕಿನ ಬಲ್ಲೆನಹಳ್ಳಿ ಗ್ರಾಮದ ತಿಮಯ್ಯ ಹಾಗೂ ಪುಟ್ಟಲಕ್ಷ್ಮಿ ದಂಪತಿಯ ಪುತ್ರಿ ಅಂಬಿಕಾ ಬಿ.ಟಿ ತೃತೀಯ ಸ್ಥಾನ ಪಡೆದುಕೊಂಡು ಜಿಲ್ಲೆಯ ಹಿರಿಮೆಯನ್ನು ಇಮ್ಮಡಿಗೊಳಿಸಿದ್ದಾರೆ.

ಈ ನಾಲ್ವರು ಸಾಧಕಿಯರು ಬಡತನದಲ್ಲಿ ಬೆಳೆದು ವಿದ್ಯಾಭ್ಯಾಸ ಮುಗಿಸಿ, ವಿವಿಗೆ ಟಾಪರ್ಸ ಆಗುವ ಮೂಲಕ ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಬಡತನ ಅಡ್ಡಿಯಾಗದು ಎಂದು ತೋರಿಸಿಕೊಟ್ಟು, ಉನ್ನತ ವ್ಯಾಸಂಗದ ಕನಸು ಹೊತ್ತ ಬಡಕುಟುಂಬದ ಯುವಕ-ಯುವತಿಯರಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!