
ಹಾಸನ : ಮದ್ದೂರಿನಲ್ಲಿ (Madduru) ಗಣೇಶ (ganesha ) ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ ಹಸಿಯಾಗಿರುವಾಗಲೇ ಹಾಸನದಲ್ಲಿ (Hassan) ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದೆ.
ಹಾಸನದಲ್ಲಿ ಗಣೇಶನಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆಯಲಾಗಿದೆ. ಬೇಲೂರು ಪಟ್ಟಣದಲ್ಲಿ ಕಿಡಿಗೇಡಿಗಳಿಂದ ನೀಚತನ ನಡೆದಿದ್ದು, ಎರಡು ಚಪ್ಪಲಿಗಳಿಗೆ ದಾರ ಕಟ್ಟಿ ಗಣೇಶನ ಮೂರ್ತಿಗೆ ಹಾರ ಹಾಕಿದ್ದಾರೆ.
ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಗಣಪತಿಗೆ ಚಪ್ಪಲಿ ಹಾರ ಹಾಕಿದ್ದಾರೆ. ಮುಂಜಾನೆ ದೇವರ ದರ್ಶನಕ್ಕೆ ಹೋದ ಭಕ್ತರಿಗೆ ಶಾಕ್ ಎದುರಾಗಿದ್ದು, ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಿಡಿಗೇಡಿಗಳನ್ನು ಬಂಧಿಸುವಂತೆ ಇದೀಗ ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.
ಘಟನೆಗೆ ಹಿಂದೂಪರ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿವೆ. ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ. ಸದ್ಯ ಗಣೇಶನಿಗೆ ಚಪ್ಪಲಿ ಹಾರ ಹಾಕಿರುವ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.