ಕೋಲಾರ: ಜಿಲ್ಲೆಯ ಬಹುತೇಕ ಜನರ ಜೀವನಾಧಾರ ಹೈನುಗಾರಿಕೆಯಾಗಿದೆ. ಮಹಿಳೆಯರು ಮತ್ತು ರೈತರ ಬೆವರು ಇದರಲ್ಲಿ ಅಡಗಿದೆ.ಹಾಲಿನ ಹಣ ತಿಂದವರು ಯಾವುದೇ ಕಾರಣಕ್ಕೂ ಉದ್ದಾರವಾಗಲ್ಲ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್ ತಿಳಿಸಿದರು.
ತಾಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಹಾಲಿಗೂ ನೀರಿಗೂ ತುಂಬಾ ವ್ಯತ್ಯಾಸವಿದೆ. ಕಲಬೆರಕೆ ಮಾಡಬೇಡಿ. ಯಾವುದಾದರೂ ತಪ್ಪು ಕಂಡುಬಂದರೆ ಕೂಡಲೇ ಪ್ರಶ್ನೆ ಮಾಡಬೇಕು. ಹಾಲಿನ ದುಡ್ಡು ತಿನ್ನಂದರೆ ರೈತರು ಮಹಿಳೆಯರ ಶಾಪ ತಟ್ಟುತ್ತದೆ ಹಾಲು ದುಡ್ಡು ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಚಂಜಿಮಲೆ ಡೇರಿಯಲ್ಲಿ ಈ ಸಾಲಿನಲ್ಲಿ 13 ಲಕ್ಷ ವ್ಯಾಪಾರ ಗಳಿಸಿದ್ದು ಅದರಲ್ಲಿ 7.46 ಲಕ್ಷದಷ್ಟು ನಿವ್ವಳ ಲಾಭಗಳಿಸಿದೆ ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಉತ್ತಮ ಲಾಭಾಂಶವನ್ನು ಪಡೆಯಬೇಕು ಕಾಲಕಾಲಕ್ಕೆ ರಾಸುಗಳಿಗೆ ವಿಮೆ, ವಾಕ್ಸಿನ್ ಮಾಡಿಸಬೇಕು ಜೊತೆಗೆ ಉತ್ಪಾದಕರು ಕಡ್ಡಾಯವಾಗಿ ಯಶಸ್ವಿನಿ ಯೋಜನೆ ಮಾಡಿಸಿ ಅದರ ಪ್ರಯೋಜನವನ್ನು ಪಡೆಯಬೇಕು ಕೋಮುಲ್ ವತಿಯಿಂದ ಎಂವಿಕೆ ಡೇರಿ, ಸೋಲಾರ್ ಘಟಕದ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಒಕ್ಕೂಟ ಮಾಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಮುನೇಶ್ ಮಾತನಾಡಿ ಒಕ್ಕೂಟಕ್ಕೆ ಸಂಘಗಳು ಆಧಾರಸ್ಥಂಭವಾಗಿದ್ದು ಯಾವುದೇ ಕಾರಣಕ್ಕೂ ಒಕ್ಕೂಟದಲ್ಲಿ ಹಣ ಪೋಲು ಆಗದಂತೆ ಚಂಜಿಮಲೆ ಡೇರಿಯಿಂದ ಪ್ರತಿನಿಧಿಸಿ ಆಯ್ಕೆಯಾದ ಕೋಮುಲ್ ನೂತನ ನಿರ್ದೇಶಕರು ಕ್ರಮ ವಹಿಸಬೇಕಾಗಿದೆ ಮಹಿಳೆಯರು ರೈತರ ಧ್ವನಿಯಾಗಿ ಕೋಮುಲ್ ಆಡಳಿತ ಮಂಡಳಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಚಂಜಿಮಲೆ ಡೇರಿ ಉಪಾಧ್ಯಕ್ಷ ಎನ್ ಶ್ರೀರಾಮಪ್ಪ, ನಿರ್ದೇಶಕರಾದ ಇ ಚಂದ್ರಪ್ಪ, ನರಸಿಂಹಪ್ಪ, ಪ್ರಸನ್ನ, ಅಲ್ಲಾಭಕಾಷ್, ದೇವರಾಜ್, ರಾಜಪ್ಪ, ಪುಷ್ಪ, ಗೌರಮ್ಮ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎನ್ ಪಾಪಣ್ಣ, ಹಾಲು ಪರೀಕ್ಷಕ ಶ್ರೀನಿವಾಸಯ್ಯ, ಸಹಾಯಕ ಮೋಹನ್ ಸೇರಿದಂತೆ ಹಾಲು ಉತ್ಪಾದಕರ ಗ್ರಾಮಸ್ಥರು ಇದ್ದರು.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…