ಹಾಲು ಖರೀದಿ ದರ ಹೆಚ್ಚಳ ಸ್ವಾಗಾತಾರ್ಹ- ಪಶು ಆಹಾರ ಬೆಲೆ ಇಳಿಕೆಗೆ ಸೀಸಂದ್ರ ಗೋಪಾಲಗೌಡ ಒತ್ತಾಯ

ಕೋಲಾರ: ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ರೈತರಿಂದ ಖರೀದಿಸುವ ಲೀಟರ್‌ ಹಾಲಿಗೆ 2 ರೂಪಾಯಿ ಹೆಚ್ಚಿಸಿದ್ದು ಸ್ವಾಗತಿಸುತ್ತೇವೆ ಇದರಿಂದಾಗಿ ಹಾಲು ಉತ್ಪಾದಕರು ಸಂತಸಗೊಂಡಿದ್ದಾರೆ ಅದೇ ರೀತಿ ಪಶು ಆಹಾರ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಹಾಲು ಉತ್ಪಾದಕರ ಹಿತ ಕಾಯುವಂತಾಗಬೇಕು ಎಂದು ಸೀಸಂದ್ರ ಹಾಲು ಡೇರಿ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಸರ್ಕಾರವನ್ನು ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಈಗಾಗಲೇ ಕೋಲಾರ ಹಾಲು ಒಕ್ಕೂಟವು ರೈತರಿಂದ ಲೀಟರ್‌ ಹಾಲಿಗೆ 30.15 ಕೊಡಲಾಗುತ್ತಿದೆ ಸರ್ಕಾರವು 2 ರೂ ಹೆಚ್ಚಿಸಿದ್ದರಿಂದ 32.15 ಕೊಡಲಾಗುತ್ತದೆ ಇದು ಒಂದು ಕಡೆ ಸಂತಸ ಆದರೆ ಬೇಸಿಗೆಯಲ್ಲಿ ಹೈನುಗಾರಿಕೆ ತುಂಬಾ ಕಷ್ಟವಾಗುತ್ತದೆ ಹಾಲು ಉತ್ಪಾದನೆ ಕಡಮೆ ಜೊತೆಗೆ ನಿರ್ವಹಣಾ ವೆಚ್ಚ ಅಧಿಕವಾಗಿರುತ್ತದೆ ಕೂಡಲೇ ಪಶು ಆಹಾರ ದರವನ್ನು ಕಡಮೆ ಮಾಡಿದರೆ ಉತ್ಪಾದಕರಿಗೆ ಅನುಕೂಲವಾಗುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು

ಈಗಾಗಲೇ ರಾಜ್ಯದಲ್ಲಿ ಬೇಸಿಗೆ ಕಾಲವು ಪ್ರಾರಂಭವಾಗಿದೆ ಹಾಲು ಉತ್ಪಾದಕ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಸಿಎಂ ಸಿದ್ದರಾಮಯ್ಯ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈತರ ಖರೀದಿ ದರ 2 ರೂಪಾಯಿ ಹೆಚ್ಚಿಸಿದ್ದಾರೆ ಹಾಲು ಉತ್ಪಾದಕರಿಗೆ ನೆರವಾಗುವ ಉದ್ದೇಶವೇ ಒಕ್ಕೂಟಕ್ಕೆ ಮುಖ್ಯವಾಗಬೇಕು ಅದೇ ರೀತಿ ಸುಮಾರು ಆರೇಳು ತಿಂಗಳಗಳ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದ್ದು ಕೂಡಲೇ ಬಿಡುಗಡೆ ಮಾಡುವ ಮೂಲಕ ಹಾಲು ಉತ್ಪಾದಕರ ನೆರವಿಗೆ ಧಾವಿಸುವಂತೆ ಸೀಸಂದ್ರ ಗೋಪಾಲಗೌಡ ಒತ್ತಾಯ ಮಾಡಿದರು.

Leave a Reply

Your email address will not be published. Required fields are marked *